ಬೆಂಗಳೂರು : ನೋಂದಾಯಿತ ಕಾರ್ಮಿಕರು ಮರಣ ಹೊಂದಿದ ವೇಳೆ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನ ನೀಡುತ್ತದೆ. ಈ ಸೌಲಭ್ಯ ಪಡೆಯಲು ಮೃತ ಫಲಾನುಭವಿಯ ವಯಸ್ಸು 60 ವರ್ಷದೊಳಗಿರಬೇಕು.
ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನ ನೀಡುತ್ತದೆ. ಈ ಸೌಲಭ್ಯ ಪಡೆಯಲು ಮೃತ ಫಲಾನುಭವಿಯ ವಯಸ್ಸು 60 ವರ್ಷದೊಳಗಿರಬೇಕು.
, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿತ ಕಾರ್ಮಿಕರ ಅಂತ್ಯಕ್ರಿಯೆಗಾಗಿ ರಾಜ್ಯ ಸರ್ಕಾರವು ₹1.50 ಲಕ್ಷದವರೆಗೆ (₹4,000 ಅಂತ್ಯಕ್ರಿಯೆ ವೆಚ್ಚ + ₹1.46 ಲಕ್ಷ ಪರಿಹಾರ ಧನ) ಆರ್ಥಿಕ ಸಹಾಯ ನೀಡುತ್ತದೆ, ವಿಶೇಷವಾಗಿ ಜುಲೈ 16, 2025ರ ನಂತರ ಮರಣ ಹೊಂದಿದವರಿಗೆ ಈ ಮೊತ್ತ ಅನ್ವಯಿಸುತ್ತದೆ; ಅದಕ್ಕೂ ಮೊದಲು ಮೃತಪಟ್ಟವರಿಗೆ ₹75,000 ಲಭ್ಯವಿತ್ತು.
ಯೋಜನೆಯ ಹೆಸರು: ಅಂತ್ಯಸಂಸ್ಕಾರ ಪರಿಹಾರ ಯೋಜನೆ (Funeral and Ex-gratia Scheme).
ಸಹಾಯದ ಮೊತ್ತ: ₹1,50,000 (ಅಂತ್ಯಕ್ರಿಯೆಗೆ ₹4,000 ಮತ್ತು ಪರಿಹಾರ ಧನವಾಗಿ ₹1,46,000).
ನೋಂದಣಿ ಹೇಗೆ?
‘KBOCWWB’ (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ) https://kbocwwb.karnataka.gov.in/login ಗೆ ನೀಡಬೇಕು. ಬಳಿಕ ನೋಂದಣಿ’ಯನ್ನು ಆಯ್ಕೆ ಮಾಡಿ.
ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, OTP ಮೂಲಕ ಪರಿಶೀಲನೆ ಪಡೆದುಕೊಳ್ಳಿ.
ನಂತರ ‘ನೋಂದಣಿ’ ಆಯ್ಕೆ ಮಾಡಿ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿದರೆ ನೋಂದಾಣಿಯಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ಅರ್ಜಿದಾರನು ಫಾರ್ಮ್ 18 ಅನ್ನು ಭರ್ತಿ ಮಾಡಿ ಇಲಾಖೆಗೆ ಸಲ್ಲಿಸಬೇಕು.ಮೃತರ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.ಗುರುತಿನ ಚೀಟಿ ಅಥವಾ ಕಾರ್ಮಿಕರ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
ಈ ಸೌಲಭ್ಯವನ್ನು ಮೃತರಾದ ಸಮಯದಿಂದ 1 ವರ್ಷದವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
.

