ಹೋಟೆಲ್ ಫುಡ್ ಗಳಲ್ಲೂ ಮಾಯವಾಯ್ತು ಟೊಮೆಟೊ; ಬೆಲೆ ಕಡಿಮೆಯಾಗುವವರೆಗೂ ಟೊಮೆಟೊ ಬಾತ್ ಮಾಡಲ್ಲ ಎಂದ ಸಿಬ್ಬಂದಿ….!

ಮೈಸೂರು: ಟೊಮೆಟೊ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಬರ್ಗರ್ ನಲ್ಲಿ ಮಾತ್ರ ಮಾಯವಾಗಿದ್ದ ಟೊಮ್ಯಾಟೊ ಈಗ ಹೋಟೆಲ್ ರೆಸಿಪಿಗಳಲ್ಲಿಯೂ ಮಾಯವಾಗುತ್ತಿದೆ. ಟೊಮ್ಯಾಟೊ ದರ ಕಡಿಮೆಯಾಗುವವರೆಗೂ ಟೊಮೆಟೊ ಬಾತ್ ಮಾಡದಿರಲು ಹೋಟೆಲ್ ಗಳು ನಿರ್ಧರಿಸಿವೆ.

ಮೈಸೂರಿನ ಹಲವು ಹೋಟೆಲ್ ಮಾಲೀಕರು ಟೊಮೆಟೊ ರೇಟ್ ಹೆಚ್ಚಳವಾಗಿರುವುದರಿಂದ ಫುಡ್ ರೆಸಿಪಿಯಲ್ಲಿ ಸಧ್ಯಕ್ಕೆ ಟೊಮೆಟೊ ಬಾತ್ ಮಾಡದಿರಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಎಲ್ಲಾ ಅಡುಗೆಗಳಿಗೂ ಟೊಮೆಟೊ ಬೇಕೇ ಬೇಕು. ಟೊಮೆಟೊ ಇಲ್ಲದೇ ಅಡುಗೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅನಿವಾರ್ಯವಾಗಿದೆ.

ನಾರ್ಥ್ ಮೀಲ್ಸ್, ಸೌಥ್ ಮೀಲ್ಸ್, ಚಾಟ್ಸ್, ತಿಳಿಸಾರು ಎಲ್ಲದಕ್ಕೂ ಟೊಮೆಟೋ ಬೇಕು. ಇನ್ನು ಟೊಮೆಟೊ ಬಾತ್ ಗಂತು ಟೊಮೆಟೊ ಇಲ್ಲದೇ ಈ ರೆಸಿಪಿ ಸಾಧ್ಯವೇ ಇಲ್ಲ. ಈಗ ಹಲವರ ಫೆವರೇಟ್ ಆಗಿದ್ದ ಟೊಮೆಟೊ ಬಾತ್ ಹೋಟೆಲ್ ನಲ್ಲಿಯೂ ಸಿಗದಂತಾಗಿದೆ.

ಟೊಮೆಟೊ ಬೆಲೆ ಏರಿಕೆಯಿಂದಾಗಿ ಮನೆಗಳಲ್ಲಿ ಅಡುಗೆ ಮನೆಗಳಲ್ಲಿ ಟೊಮೆಟೊ ಬದಲು ಹುಣೆಸೆ ಹಣ್ಣಿಗೆ ಪಟ್ಟಾಭಿಷೇಕ ಮಾಡಿ ಟೊಮೆಟೊ ಬದಲು ಹುಣಸೆ ಹಣ್ಣು ಬಳಸಲಾಗುತ್ತಿದೆ. ಆದರೆ ಅಡುಗೆ ರುಚಿಸುತ್ತಿಲ್ಲ. ಹೋಟೆಲ್ ಗಳಲ್ಲಿ ಟೊಮೆಟೊ ಇಲ್ಲದೇ ಅಡುಗೆ ಸಾಧ್ಯವೇ ಇಲ್ಲ.

ಟೊಮೆಟೊ ಬೆಲೆ ಏರಿಕೆಯಿಂದ ಸಮಸ್ಯೆಯಾಗಿದ್ದು, ಹೋಟೆಲ್ ಗಳಲ್ಲಿ ಊಟ, ತಿಂಡಿ ರುಚಿ ಇಲ್ಲದೇ ಗ್ರಾಹಕರು ಬೈಯ್ದು ಹೋಗುತ್ತಿದ್ದಾರೆ ಎಂದು ಹೋಟೆಲ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read