ಹುಡುಗಿಯರಿಗೆ ಇಲ್ಲಿದೆ ಬ್ರಾ ಬಗ್ಗೆ ಒಂದಿಷ್ಟು ʼಮಾಹಿತಿʼ

ಹುಡುಗಿಯರು ಹಾಗೂ ಮಹಿಳೆಯರ ಕಪಾಟಿನಲ್ಲಿ ಬ್ರಾ ಇದ್ದೇ ಇರುತ್ತೆ. ಪ್ರತಿ ದಿನ ಒಳ ಉಡುಪನ್ನು ಮಹಿಳೆಯರು ಬಳಸ್ತಾರೆ. ಆದ್ರೆ ಅದ್ರ ಬಗ್ಗೆ ಕೆಲವೊಂದು ವಿಷ್ಯಗಳು ಮಹಿಳೆಯರಿಗೆ ತಿಳಿದಿಲ್ಲ. ವಿಶೇಷವಾಗಿ ಬ್ರಾ ಸ್ವಚ್ಛಗೊಳಿಸುವ ಬಗ್ಗೆ. ಡ್ರೆಸ್ ಗೆ ಮ್ಯಾಚಿಂಗ್ ಬ್ರಾ ಖರೀದಿ ಮಾಡುವ ಮಹಿಳೆಯರು ಅದನ್ನು ಸರಿಯಾಗಿ ಸ್ವಚ್ಛಗೊಳಿಸದೆ ದುಬಾರಿ ಬ್ರಾವನ್ನು ಬಹಳ ಬೇಗ ಹಾಳು ಮಾಡಿಕೊಳ್ತಾರೆ.

ಬ್ರಾ ತೊಳೆದ ಮೇಲೆ ಅದ್ರ ಹುಕ್ ಕಿತ್ತುಹೋಗುವ ಪ್ರಸಂಗ ಹೆಚ್ಚಿರುತ್ತದೆ. ಕೆಲವರು ಪ್ರತಿದಿನ ಈ ಸಮಸ್ಯೆ ಎದುರಿಸುತ್ತಾರೆ. ಬ್ರಾ ತೊಳೆಯುವ ವೇಳೆ ಅದ್ರಲ್ಲೂ ವಾಷಿಂಗ್ ಮಶಿನ್ ಗೆ ಹಾಕುವ ವೇಳೆ ಬ್ರಾ ಹುಕ್ ಹಾಕಿರಬೇಕು. ಇಲ್ಲವಾದ್ರೆ ಬ್ರಾ ಹುಕ್ ಬೇರೆ ಬಟ್ಟೆಗೆ ಹಿಡಿದು ಹರಿದು ಹೋಗುತ್ತದೆ.

ವಾಷಿಂಗ್ ಮಶಿನ್ ಬದಲು ಕೈ ಬೆಸ್ಟ್. ಸಾಧ್ಯವಾದಷ್ಟು ವಾಷಿಂಗ್ ಮಶಿನ್ ಬದಲು ಕೈನಲ್ಲಿ ಬ್ರಾ ತೊಳೆಯಿರಿ. ಇದ್ರಿಂದ ಬ್ರಾ ಬಹು ಕಾಲ ಬಾಳಿಕೆ ಬರುತ್ತದೆ.

ಆನ್ಲೈನ್ ಮಾರುಕಟ್ಟೆಗಳು ಮಾರಾಟ ಹೆಚ್ಚಿಸಲು ಹೊಸ ಹೊಸ ವಸ್ತುಗಳನ್ನು ಪರಿಚಯಿಸುತ್ತಿವೆ. ಅದ್ರಲ್ಲಿ ಬ್ರಾ ವಾಷಿಂಗ್ ಬ್ಯಾಗ್ ಕೂಡ ಒಂದು. ನಿಧಾನವಾಗಿ ವಾಷಿಂಗ್ ಬ್ಯಾಗ್ ಪ್ರಚಾರ ಹೆಚ್ಚಾಗ್ತಿದೆ. ಬ್ರಾವನ್ನು ನೇರವಾಗಿ ವಾಷಿಂಗ್ ಮಶಿನ್ ಗೆ ಹಾಕುವ ಬದಲು ಬ್ರಾ ವಾಷಿಂಗ್ ಬ್ಯಾಗ್ ನಲ್ಲಿ ಹಾಕಿ ವಾಷಿಂಗ್ ಮಶಿನ್ ಗೆ ಹಾಕುವುದು ಒಳ್ಳೆಯದು.

ಬಿಸಿ ನೀರಿನಲ್ಲಿ ಬ್ರಾ ತೊಳೆಯುವುದ್ರಿಂದ ಬ್ರಾ ಸ್ವಚ್ಛವಾಗುತ್ತದೆ ಎಂಬುದು ಕೆಲವರ ನಂಬಿಕೆ. ಬ್ಯಾಕ್ಟೀರಿಯಾ ಸಾಯುತ್ತದೆ ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದ್ರೆ ಇದು ತಪ್ಪು. ಬಿಸಿ ನೀರಿನ ಬದಲು ತಣ್ಣನೆ ನೀರಿನಲ್ಲಿ ಬ್ರಾ ತೊಳೆಯಬೇಕು. ಬಿಸಿ ನೀರು ಬ್ರಾ ಹಾಳಾಗಲು ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read