ಹುಟ್ಟುಹಬ್ಬದಲ್ಲಿ ಕೇಕ್ ಮೇಲೆ ಮೋಂಬತ್ತಿ ಉರಿಸ್ತೀರಾ….? ಕಾದಿದೆ ಈ ಅಪಾಯ

ಹುಟ್ಟುಹಬ್ಬ ಆಚರಿಸುವಾಗ ಕೇಕ್ ಮೇಲೆ ಕ್ಯಾಂಡಲ್ ಗಳನ್ನು ಉರಿಸಿ ಅದನ್ನು ಆರಿಸೋದು ಕಾಮನ್. ಎಲ್ಲರೂ ಖುಷಿ ಖುಷಿಯಾಗಿ ಮೋಂಬತ್ತಿಗಳನ್ನು ಆರಿಸಿ ನಂತರ ಆ ಕೇಕ್ ಅನ್ನು ಕತ್ತರಿಸ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳು ತುಂಬಿಕೊಳ್ಳುತ್ತವೆ.

ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಮೋಂಬತ್ತಿ ಆರಿಸುವ ವೇಳೆ ಉಗುಳು ಕೂಡ ಕೇಕ್ ಮೇಲೆ ಬೀಳುತ್ತದೆ. ಇದರಿಂದಾಗಿ ಕೇಕ್ ನಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಶೇ. 1400 ರಷ್ಟು ಜಾಸ್ತಿಯಾಗುತ್ತದೆ.

ಕ್ಯಾಂಡಲ್ ಆರಿಸುತ್ತಿದ್ದಂತೆ ಕೇಕ್ ಮೇಲೆ ಬ್ಯಾಕ್ಟೀರಿಯಾಗಳ ಪ್ರಮಾಣ ದಿಢೀರನೆ ವೃದ್ಧಿಯಾಗುತ್ತದೆ. ಹಾಗಾಗಿ ಆ ಕೇಕ್ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ವಿಜ್ಞಾನಿಗಳು. ಕೇಕ್ ಮೇಲೆ ಕ್ಯಾಂಡಲ್ ಇಟ್ಟು ಅದನ್ನು ಆರಿಸುವ ಸಂಪ್ರದಾಯ ಆರೋಗ್ಯಕ್ಕೆ ಮಾರಕ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ತಮ್ಮ ಹುಟ್ಟುಹಬ್ಬಗಳಲ್ಲಿ ಕ್ಯಾಂಡಲ್ ಉರಿಸಿ ಆರಿಸ್ತಾರೆ. ಆದ್ರೆ ಇದುವರೆಗೂ ಈ ಆಚರಣೆಯಲ್ಲಿರೋ ಅಪಾಯದ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ಮನುಷ್ಯರ ಬಾಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳಿರುತ್ತವೆ. ಆದ್ರೆ ಅವುಗಳಲ್ಲಿ ಬಹುತೇಕ ಯಾವುದೂ ಹಾನಿಕಾರಕವಾಗಿರುವುದಿಲ್ಲ. ಅಕಸ್ಮಾತ್ ಕ್ಯಾಂಡಲ್ ಆರಿಸಿದ ವ್ಯಕ್ತಿಗೇನಾದ್ರೂ ಖಾಯಿಲೆ ಇದ್ರೆ, ಆರೋಗ್ಯ ಸಮಸ್ಯೆ ಇದ್ರೆ ಅಪಾಯ ಗ್ಯಾರಂಟಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read