ಹಿಂಬಾಲಕರಿಲ್ಲದೆ ವಿಧಾನಸೌಧಕ್ಕೆ ಬಂದ ಶಾಸಕರನ್ನು ಕಂಡು ಭದ್ರತಾ ಸಿಬ್ಬಂದಿಗೆ ಅಚ್ಚರಿ…!

ಚುನಾಯಿತ ಪ್ರತಿನಿಧಿಗಳ ಜೊತೆ ಯಾವಾಗಲೂ ಹಿಂಬಾಲಕರು ಇರುವುದು ಸಾಮಾನ್ಯ ಸಂಗತಿ. ಹಾಗೆ ಅವರ ಹಿಂದೆ ಜಾಸ್ತಿ ಜನ ಇದ್ದಷ್ಟು ಅದಕ್ಕೊಂದು ತೂಕ ಎಂಬ ಮಾತಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಕಲಾಪದಲ್ಲಿ ಭಾಗವಹಿಸಲು ಶಾಸಕರೊಬ್ಬರು ಒಬ್ಬಂಟಿಯಾಗಿ ಬಂದಿದ್ದು, ಇದನ್ನು ಕಂಡು ಭದ್ರತಾ ಸಿಬ್ಬಂದಿಯೇ ಅಚ್ಚರಿಗೊಳಗಾಗಿದ್ದಾರೆ.

ಇಂತಹದೊಂದು ಘಟನೆ ಬುಧವಾರದಂದು ವಿಧಾನಸೌಧದಲ್ಲಿ ನಡೆದಿದ್ದು, ಕಲಾಪದಲ್ಲಿ ಭಾಗವಹಿಸಲು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಬಂದಿದ್ದಾರೆ. ಆ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿ ಪೊಲೀಸರು ತಡೆದಿದ್ದು, ಚನ್ನಬಸಪ್ಪ, ನಾನು ಶಿವಮೊಗ್ಗ ಕ್ಷೇತ್ರದ ಎಂಎಲ್ಎ ಎಂದು ಪರಿಚಯಿಸಿಕೊಂಡಿದ್ದಾರೆ.

ಆಗ, ನಿಮ್ಮ ಜೊತೆಗೆ ಯಾರೂ ಇಲ್ಲವಲ್ಲ ಸರ್. ಒಬ್ಬರೇ ಬಂದಿದ್ದೀರಲ್ಲ. ಹಾಗಾಗಿ ಯಾರೋ ಎಂದುಕೊಂಡಿದ್ದೇವು ಎಂದು ಹೇಳಿದ ಮಹಿಳಾ ಪೊಲೀಸ್ ಬಳಿಕ ಚನ್ನಬಸಪ್ಪ ಅವರನ್ನು ಒಳಗೆ ಕಳುಹಿಸಿದ್ದಾರೆ. ಚನ್ನಬಸಪ್ಪ ಇದೇ ಮೊದಲ ಬಾರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read