ಹಣ್ಣುಗಳು ಹಾಳಾಗದಂತೆ ರಕ್ಷಿಸಲು ಇಲ್ಲಿದೆ ಟಿಪ್ಸ್

ಹಣ್ಣು ಅಥವಾ ತರಕಾರಿಗಳನ್ನು ಹೆಚ್ಚು ದಿನಗಳವರೆಗೂ ಹಾಳಾಗದಂತೆ ಕಾಪಾಡುವ ಕೆಲವು ಟಿಪ್ಸ್ ಗಳು ಇಲ್ಲಿವೆ.
ಕಾಟನ್ ಬಟ್ಟೆಯ ಬ್ಯಾಗ್ ಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಇಡಿ. ಪ್ಲಾಸ್ಟಿಕ್ ಕವರ್‌ ಗಳಲ್ಲಿ ಕಟ್ಟಿಟ್ಟರೆ ಅದು ಕೊಳೆತು ಹೋಗುತ್ತದೆ.

ಬಾಳೆಹಣ್ಣನ್ನು ಗೊಂಚಲು ಸಮೇತ ಕಟ್ಟಿಡುವುದರಿಂದ ನಿಧಾನವಾಗಿ ಹಣ್ಣಾಗುವಂತೆ ಮಾಡಬಹುದು. ಬಾಳೆಹಣ್ಣನ್ನು ಪ್ರತ್ಯೇಕವಾಗಿ ಒಂದೊಂದಾಗಿ ಕಟ್ಟಿಡುವುದು ಅತ್ಯುತ್ತಮ ವಿಧಾನ.

ಟೊಮೆಟೊವನ್ನು ಫ್ರಿಜ್ ನಿಂದ ಹೊರಗಿಡಿ. ಇಲ್ಲವಾದರೆ ಅದರ ಮೇಲ್ಮೈ ಕೊಳೆತು ಹೋಗಬಹುದು. ಅವಕಾಡೊ, ಬಾಳೆಹಣ್ಣು, ಪೀಚ್, ಪಿಯರ್ ಮತ್ತು ಪ್ಲಮ್ ಹಣ್ಣಾದ ಬಳಿಕವೂ ಸೇವಿಸದಿದ್ದಲ್ಲಿ ಮಾತ್ರ ಫ್ರಿಜ್ ನಲ್ಲಿಡಿ.

ಆಧುನಿಕ ಫ್ರಿಜ್ ಗಳಲ್ಲಿ ಹಣ್ಣು, ತರಕಾರಿಗಳನ್ನಿಡಲು ಪ್ರತ್ಯೇಕ ವಿಭಾಗಗಳಿರುತ್ತವೆ. ಅದು ಬಹುದಿನಗಳ ತನಕ ಆಹಾರ ಹಾಳಾಗದಂತೆ ನೋಡಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read