HomeLifestyleಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. ಹಾಗಾದರೆ ಈ ತಂಬುಳಿ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೌತೆಕಾಯಿ ಬೀಜ 1/4 ಕಪ್
ತೆಂಗಿನಕಾಯಿ ತುರಿ 2 ಟೀ ಚಮಚ
ಕಾಳುಮೆಣಸು 8
ಜೀರಿಗೆ 1 ಟೀ ಚಮಚ
ಮಜ್ಜಿಗೆ 1/2 ಲೀಟರ್
ರುಚಿಗೆ ತಕ್ಕಷ್ಟು ಉಪ್ಪು
ಸಾಸಿವೆ 1 ಟೀ ಚಮಚ
ಒಣಮೆಣಸಿನಕಾಯಿ 1
ಎಣ್ಣೆ ಅಥವಾ ತುಪ್ಪ 1 ಟೀ ಚಮಚ

ಮಾಡುವ ವಿಧಾನ

ಮೊದಲು ಸೌತೆಕಾಯಿ ಬೀಜಕ್ಕೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಅದನ್ನು ಸೋಸಿಕೊಳ್ಳಬೇಕು.
ನಂತರ ಬಾಣಲೆಯಲ್ಲಿ ಜೀರಿಗೆ, ಕಾಳುಮೆಣಸು, ಸ್ವಲ್ಪ ತುಪ್ಪವನ್ನು ಹಾಕಿ ಹುರಿಯಬೇಕು. ನಂತರ ಹುರಿದ ಪದಾರ್ಥ, ತೆಂಗಿನಕಾಯಿ ತುರಿ, ಉಪ್ಪು ಮತ್ತು ತಯಾರಿಸಿಕೊಂಡ ಸೌತೆಕಾಯಿ ಬೀಜದ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು.

ನಂತರ ಈ ಮಿಶ್ರಣಕ್ಕೆ ಮೊಸರು ಅಥವಾ ಮಜ್ಜಿಗೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಬೇಕು.
ನಂತರ ಅದಕ್ಕೆ ಸಾಸಿವೆ, ಒಣ ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆಯನ್ನು ಹಾಕಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular