ಸೋಮನಾಥ ದೇಗುಲಕ್ಕೆ ಮುಕೇಶ್ ಅಂಬಾನಿಯವರಿಂದ 1.51 ಕೋಟಿ ರೂ. ದೇಣಿಗೆ

ಗಾಂಧಿನಗರ: ಮಹಾಶಿವರಾತ್ರಿ ಸಂದರ್ಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ಅವರ ಮಗ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಸೋಮನಾಥ ಮಹಾದೇವ್ ದೇಗುಲದಲ್ಲಿ ದರ್ಶನ ಪಡೆದರು. ಇವರಿಬ್ಬರನ್ನು ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಪಿ.ಕೆ. ಲಾಹಿರಿ, ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದರು.

ಮುಕೇಶ್ ಅಂಬಾನಿ ಮತ್ತು ಆಕಾಶ್ ಅಂಬಾನಿ ದೇವರ ವಿಗ್ರಹದ ಮುಂದೆ ಅಭಿಷೇಕವನ್ನು ಮಾಡಿ, ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಅರ್ಚಕರು ಗೌರವಾರ್ಥವಾಗಿ ಗಂಧವನ್ನು ನೀಡಿದರು.

ಅಂಬಾನಿ ಕುಟುಂಬಸ್ಥರು ಹಿಂದೂ ಸಂಪ್ರದಾಯಗಳಲ್ಲಿ ಬಹಳ ನಂಬಿಕೆ ಇರಿಸಿದ್ದು, ಎಲ್ಲಾ ಹಿಂದೂ ಹಬ್ಬಗಳನ್ನು ಶ್ರದ್ಧಾ- ಉತ್ಸಾಹದಿಂದ ಆಚರಿಸುತ್ತಾರೆ. ಮಹಾ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಮುಕೇಶ್ ಅಂಬಾನಿ ಅವರು ಸೋಮನಾಥ ದೇವಸ್ಥಾನದ ಟ್ರಸ್ಟ್‌ಗೆ ₹ 1.51 ಕೋಟಿ ದೇಣಿಗೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read