HomeLatest Newsಸುಲಭವಾಗಿ ತಯಾರಿಸಿ ರುಚಿಯಾದ ಮಿಲ್ಕ್ ಕೇಕ್

ಸುಲಭವಾಗಿ ತಯಾರಿಸಿ ರುಚಿಯಾದ ಮಿಲ್ಕ್ ಕೇಕ್

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು.

ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂರು ಲೀಟರ್ ಹಾಲು

2 ಚಮಚ ಲಿಂಬೆ ಹಣ್ಣಿನ ರಸ

1 ಚಮಚ ಏಲಕ್ಕಿ ಪುಡಿ

1 ಚಮಚ ತುಪ್ಪ

250 ಗ್ರಾಂ ಸಕ್ಕರೆ

ಸ್ವಲ್ಪ ಎಣ್ಣೆ, ಅಲಂಕಾರಕ್ಕೆ ಬಾದಾಮಿ.

ಮಿಲ್ಕ್ ಕೇಕ್ ಮಾಡುವ ವಿಧಾನ: ಒಂದು ಪಾತ್ರೆಗೆ ಹಾಲನ್ನು ಹಾಕಿ ಬಿಸಿ ಮಾಡಿ. ನಂತ್ರ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ. ಹಾಲು ಒಡೆಯಲು ಶುರುವಾಗುವವರೆಗೆ ಕೈ ಆಡಿಸುತ್ತಿರಿ.

 ನಂತ್ರ ಏಲಕ್ಕಿ ಪುಡಿ, ತುಪ್ಪ, ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಬೇಯಿಸಿ. ಪಾತ್ರೆಯ ತಳಕ್ಕೆ ಇದು ಹಿಡಿಯದಂತೆ ನೋಡಿಕೊಳ್ಳಿ. ಹದ ಬಂದ ಮೇಲೆ ಒಂದು ಪ್ಲೇಟ್ ಗೆ ಎಣ್ಣೆ ಸವರಿ ಈ ಮಿಶ್ರಣವನ್ನು ಅದರ ಮೇಲೆ ಸವರಿ. ಅಲಂಕಾರಕ್ಕೆ ಅದ್ರ ಮೇಲೆ ಬಾದಾಮಿ ಉದುರಿಸಿ. ರಾತ್ರಿ ಪೂರ್ತಿ ಇದನ್ನು ಮುಚ್ಚಿಡಿ. ಬೆಳಿಗ್ಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular