HomeKarnatakaಸಿದ್ದರಾಮಯ್ಯ ಹೇಳಿಕೆ ತಿರುಚಿದ ಅದಾನಿ ಟಿವಿ; ಸುರ್ಜೇವಾಲಾ ವಾಗ್ದಾಳಿ

ಸಿದ್ದರಾಮಯ್ಯ ಹೇಳಿಕೆ ತಿರುಚಿದ ಅದಾನಿ ಟಿವಿ; ಸುರ್ಜೇವಾಲಾ ವಾಗ್ದಾಳಿ

ಅದಾನಿ ಮಾಲಿಕತ್ವದ ಎನ್.ಡಿ. ಟಿವಿಗೆ ಸಂದರ್ಶನ ನೀಡುವ ವೇಳೆ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಕುರಿತಂತೆ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯನ್ನು ತಿರುಚುವ ಮೂಲಕ ಕಾಂಗ್ರೆಸ್ ನಾಯಕರ ನಡುವೆ ಬಿರುಕು ಮೂಡಿಸಲು ಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯನವರು ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿದ್ದರೂ ಸಹ ಎನ್.ಡಿ. ಟಿವಿ ಸೇರಿದಂತೆ ಕೆಲ ಮಾಧ್ಯಮಗಳು ಸ್ಪಷ್ಟನೆಯನ್ನು ಪ್ರಕಟಿಸದೆ ತಿರುಚಿದ ಸುದ್ದಿಯನ್ನೇ ಪ್ರಸಾರ ಮಾಡಿವೆ. ಆದರೆ ಅದಾನಿ ಟಿವಿ ಕೂಡ ಬಿಜೆಪಿ ಸೋಲುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 40% ಬಿಜೆಪಿ ಸರ್ಕಾರ ತನ್ನ ಪಾಪಗಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಬಿಜೆಪಿಯ ಶಾಸಕ, ವಿಧಾನ ಪರಿಷತ್ ಸದಸ್ಯರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಸುರ್ಜೆವಾಲಾ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular