ಸಿದ್ದರಾಮಯ್ಯನವರಿಗೆ ಲಕ್ಷ ರೂ. ಮೌಲ್ಯದ ಟಗರು ನೀಡಲು ಅಭಿಮಾನಿಗಳ ಸಿದ್ಧತೆ….!

ಸಿದ್ದರಾಮಯ್ಯನವರನ್ನು ಅವರ ಅಭಿಮಾನಿಗಳು ‘ಟಗರು’ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಶನಿವಾರದಂದು ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿರುವ ಸಿದ್ದರಾಮಯ್ಯನವರಿಗೆ ಇದೀಗ ವಿಶೇಷ ಉಡುಗೊರೆಯೊಂದು ಕಾಯುತ್ತಿದೆ.

ಹೌದು, ಕೋಲಾರದ ಸಿದ್ದರಾಮಯ್ಯ ಅಭಿಮಾನಿಗಳು 1 ಲಕ್ಷ ರೂಪಾಯಿ ಮೌಲ್ಯದ ಟಗರನ್ನು ಖರೀದಿಸಿದ್ದು, ಇದನ್ನು ತಮ್ಮ ನೆಚ್ಚಿನ ನಾಯಕನಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ. 67 ಕೆಜಿ ತೂಕದ ಈ ಟಗರನ್ನು ಇಂದು ಸಿದ್ದರಾಮಯ್ಯನವರಿಗೆ ತಲುಪಿಸಲಾಗುತ್ತದೆ.

ಇದಕ್ಕೂ ಮುನ್ನ ಶನಿವಾರದಂದು ಕೋಲಾರ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿಲ್ಲಾ ಕುರುಬರ ಸಂಘದ ಕಾರ್ಯಾಧ್ಯಕ್ಷ ಜೆ.ಕೆ. ಜಯರಾಮ್ ನೇತೃತ್ವದಲ್ಲಿ ‘ಸಿದ್ದರಾಮಣ್ಣ ಸೇನೆ’ ಅಭಿಮಾನಿಗಳು ಟಗರಿನ ಮೆರವಣಿಗೆ ನಡೆಸಿದ್ದಾರೆ. ಕೋಲಾರಮ್ಮ ದೇವಾಲಯ ಸೇರಿದಂತೆ ವಿವಿಧೆಡೆ ಪೂಜೆ ಮಾಡಿಸಿ ಸಿದ್ದರಾಮಯ್ಯನವರಿಗೆ ಟಗರನ್ನು ತಲುಪಿಸಲಾಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read