HomeKarnatakaಸಿದ್ದರಾಮಯ್ಯನವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ

ಸಿದ್ದರಾಮಯ್ಯನವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು ಅಫಿಡವಿಟ್ ಪ್ರಕಾರ ಅವರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ.

ಸಿದ್ದರಾಮಯ್ಯನವರ ಅವರ ಸ್ಥಿರಾಸ್ತಿ ಮೌಲ್ಯ 9.43 ಕೋಟಿ ರೂ. ಇದ್ದರೆ, ಅವರ ಪತ್ನಿ ಪಾರ್ವತಿಯವರ ಆಸ್ತಿ ಮೌಲ್ಯ 19.56 ಕೋಟಿ. ಜೊತೆಗೆ ಪಾರ್ವತಿಯವರು 1.29 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಬಳಿ 9.58 ಕೋಟಿ ಚರಾಸ್ತಿ ಇದ್ದರೆ, ಅವರ ಪತ್ನಿ ಬಳಿ 11.26 ಕೋಟಿ ರೂ. ಚರಾಸ್ತಿ ಇದೆ. ಸಿದ್ದರಾಮಯ್ಯ ಅವರ ಬಳಿ 21.86 ಲಕ್ಷ ನಗದು ಠೇವಣಿ ಇದ್ದರೆ, ಪಾರ್ವತಿ ಅವರ ಬಳಿ 6.92 ಕೋಟಿ ರೂ.ಇದೆ.
ಸಿದ್ದರಾಮಯ್ಯ ಅವರ ಬಳಿ 21 ಲಕ್ಷ ಮೌಲ್ಯದ ಚಿನ್ನ, 1.26 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಇವೆ. ಅವರ ಪತ್ನಿ ಬಳಿ 32.40 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2.83 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಇವೆ.

ಪಾರ್ವತಿ ಅವರು ಸುಮಾರು 16.24 ಕೋಟಿ ರೂಪಾಯಿ ಸಾಲ ಹೊಂದಿದ್ದರೆ, ಸಿದ್ದರಾಮಯ್ಯ ಅವರ ಸಾಲದ ಹೊರೆ 6.84 ಕೋಟಿ ರೂಪಾಯಿ.
ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಆದರೆ ಪಾರ್ವತಿ ಅವರಿಗೆ ಕುಂದಲಹಳ್ಳಿಯಲ್ಲಿ 1.08 ಎಕರೆ, ತೊರಾಯನ ಕಾಟೂರಿನಲ್ಲಿ 7.17 ಎಕರೆ, ವಿಜಯನಗರದಲ್ಲಿ ಕೃಷಿಯೇತರ ಭೂಮಿ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular