HomeEntertainmentಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಬೆಂಗಳೂರು: ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆಗೆ ತಯಾರಾಗಿದೆ. ಸಿಂಹ ಪ್ರಿಯ ಎಂಬ ಮುದ್ರೆಯನ್ನೊತ್ತು ಮದುವೆಗೆ ಸಜ್ಜಾಗಿದ್ದಾರೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು ಮೈಸೂರಿನಲ್ಲಿ ಸಿಂಹಪ್ರಿಯಾ ಜೋಡಿ ಹಸೆಮಣೆ ಏರುತ್ತಿದ್ದಾರೆ. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಇರಲಿದೆ.

ಇನ್ನು ಈ ಜೋಡಿಯ ಲವ್ ಸ್ಟೋರಿ ಹೇಗೆ ಶುರುವಾಯ್ತು ಅನ್ನೋದನ್ನ ತಿಳಿದುಕೊಳ್ಳಬೇಕು ಅಂತ ಅನೇಕರಿಗೆ ಅನ್ನಿಸಿದಂತೂ ಇದೆ. ಈ ಕುರಿತಂತೆ ಅವರೇ ಮಾತನಾಡಿದ್ದಾರೆ. ಲಾಕ್ ಡೌನ್ ಇವರ ಪ್ರೀತಿಗೆ ಒಂದು ದೊಡ್ಡ ಸೇತುವೆಯಂತೆ. ಅಷ್ಟೆ ಅಲ್ಲ ಹರಿಪ್ರಿಯ ತಂದೆಯ ಕಾರ್ಯದ ದಿನವೇ ಹರಿಪ್ರಿಯಾಗೆ ಸಿಂಹ ಪ್ರಪೋಸ್ ಮಾಡಿದ್ದರಂತೆ. ಅಂದಿನಿಂದಲೇ ಇವರ ಪ್ರೀತಿಗೆ ಅಧಿಕೃತ ಮುದ್ರೆ ಬಿದ್ದಿದೆ.

ಇನ್ನು ಇಬ್ಬರ ಒಂದಿಷ್ಟು ಕಾಮನ್ ವಿಚಾರಗಳು ಕೂಡ ಇವರ ಪ್ರೀತಿ ಬಂಧನ ಹೆಚ್ಚು ಆಗೋದಿಕ್ಕೆ ಕಾರಣವಾಯ್ತಂತೆ. ಇನ್ನು ಹರಿಪ್ರಿಯ ಸಿನಿಮಾಗಳು, ಅವರ ನಟನೆಗೆ ಮನಸೋತರಂತೆ ವಸಿಷ್ಠ. ಇನ್ನು ಹರಿ ಪ್ರಿಯ ಅವರ ಗುಣಕ್ಕೆ ನಾನು ಮಾರು ಹೋಗಿದ್ದೇನೆ ಎಂದು ಹೇಳಿದ್ದಾರೆ ಸಿಂಹ. ಮದುವೆಯಾದ ಮೇಲೆ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ತೀನಿ. ನಂತರ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದಾರೆ ಹರಿಪ್ರಿಯ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular