
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಪಠ್ಯ ಪುಸ್ತಕದಲ್ಲಿದ್ದ ಸಾವರ್ಕರ್ ಪಾಠವನ್ನು ಕಾಂಗ್ರೆಸ್ ಕೈಬಿಡುತ್ತಿದೆ. ಸಾವರ್ಕರ್ ಪಾಠ ಓದಿದರೆ ಮಕ್ಕಳು ದೇಶ ದ್ರೋಹಿಗಳಾಗ್ತಾರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ ನವರು ರಣಹೇಡಿಗಳು ಮಾತ್ರವಲ್ಲ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನವರಿಗೆ ಬೇಕಾಗಿರುವುದು ಟಿಪ್ಪು ಪಾಠ. ಕಾರಣ ತುಷ್ಟೀಕರಣ ರಾಜಕಾರಣ ಮಾಡುವುದು ಅವರ ಉದ್ದೇಶ ಎಂದು ವಾಗ್ದಾಳಿ ನಡೆಸಿದ್ದಾರೆ.

