HomeLifestyleಸವಿಯಿರಿ ಡಾರ್ಕ್ ಚಾಕೋಲೇಟ್ ದಾಲ್ಚಿನ್ನಿ ಕಾಫಿ

ಸವಿಯಿರಿ ಡಾರ್ಕ್ ಚಾಕೋಲೇಟ್ ದಾಲ್ಚಿನ್ನಿ ಕಾಫಿ

ಕಾಫಿ ಪ್ರಿಯರಿಗೆ ವೆರೈಟಿ ಕಾಫಿ ಮಾಡಿಕೊಟ್ರೆ, ಆಹಾ…! ಅವರ ಆನಂದಕ್ಕೆ ಪಾರವೇ ಇರೋದಿಲ್ಲ. ಅಂತಹ ಒಂದು ಕಾಫಿ ವೆರೈಟಿ ರೆಸಿಪಿ ಇಲ್ಲಿದೆ. ಡಾರ್ಕ್ ಚಾಕೋಲೇಟ್, ದಾಲ್ಚಿನ್ನಿ, ಜಾಯಿಕಾಯಿಗಳನ್ನು ಬಳಸಿ ಮಾಡುವಂತಹ ಈ ಸರಳವಾದ ಕಾಫಿಯನ್ನು ನೀವೂ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಾಗ್ರಿಗಳು : 1 ಚಮಚ ಡಾರ್ಕ್ ಚಾಕೋಲೇಟ್, 1 ಚಮಚ ಕಾಫಿ ಪೌಡರ್, 1 ಚಮಚ ಸಕ್ಕರೆ, 1 ಗ್ಲಾಸ್ ಹಾಲು, ¼ ಚಮಚ ದಾಲ್ಚಿನ್ನಿ, ¼ ಚಮಚ ಜಾಯಿಕಾಯಿ ಪೌಡರ್, 1 ಚಮಚ ಕೋಲ್ಡ್ ಮಿಲ್ಕ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ : ಕಾಫಿ ಮಗ್ ನಲ್ಲಿ ಡಾರ್ಕ್ ಚಾಕೋಲೇಟ್, ದಾಲ್ಚಿನ್ನಿ ಪುಡಿ, ಕಾಫಿ ಪುಡಿ, ಜಾಯಿಕಾಯಿ ಪುಡಿ ಮತ್ತು ಒಂದು ಚಮಚ ಕೋಲ್ಡ್ ಮಿಲ್ಕನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಒಂದು ಗ್ಲಾಸ್ ಬಿಸಿ ಹಾಲನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ತಕ್ಷಣ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular