HomeKarnatakaಸರ್ಕಾರಿ ನೌಕರರಿಗೆ ‘ಹಳೆ ಪಿಂಚಣಿ ಯೋಜನೆ’ ಜಾರಿಗೊಳಿಸುವಂತೆ ಡಿಸಿಎಂ ಡಿಕೆಶಿಗೆ ಮನವಿ

ಸರ್ಕಾರಿ ನೌಕರರಿಗೆ ‘ಹಳೆ ಪಿಂಚಣಿ ಯೋಜನೆ’ ಜಾರಿಗೊಳಿಸುವಂತೆ ಡಿಸಿಎಂ ಡಿಕೆಶಿಗೆ ಮನವಿ

ಬೆಂಗಳೂರು : ‘ಹಳೆ ಪಿಂಚಣಿ ಯೋಜನೆ’ ಜಾರಿಗೊಳಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ (DCM DK shivakumar) ಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿತು.

ಪ್ರಣಾಳಿಕೆಯಲ್ಲಿನ ಭರವಸೆಯಂತೆ ಎನ್.ಪಿ.ಎಸ್ (NPS) ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಹಾಗೂ 7ನೇ ವೇತನ ಆಯೋಗದ (7th Pay (Commission) ವರದಿಯನ್ನು ಪಡೆದು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂತೆಯೇ ರಾಜ್ಯ ಸರ್ಕಾರಿ ನೌಕರರ ಸಂಘದಿಂದ (State Government Employees Association) ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.

For Latest News Updates, Join Our Whatsapp Community🚩
RELATED ARTICLES

Most Popular