ಸಂಭಾಷಣೆ ತಿದ್ದಲು ಸಿದ್ಧವೆಂದ ‘ಆದಿಪುರುಷ್’ ಚಿತ್ರತಂಡ

ಕಳೆದ ಶುಕ್ರವಾರದಂದು ಬಿಡುಗಡೆಯಾಗಿರುವ ಪ್ರಭಾಸ್ ಅಭಿನಯದ ‘ಆದಿಪುರುಷ್’, ವಿವಾದದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಅಪಸ್ವರಗಳು ಕೇಳಿ ಬರುತ್ತಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸಿ ನೇಪಾಳದಲ್ಲಿ ‘ಆದಿಪುರುಷ್’ ಗೆ ನಿಷೇಧ ಹೇರಲಾಗಿದೆ.

ಅಲ್ಲದೆ ಭಾರತದಲ್ಲಿನ ಹಲವು ಹಿಂದೂ ಪರ ಸಂಘಟನೆಗಳು ಸಹ ಆದಿಪುರುಷ್ ಚಿತ್ರದ ಸಂಭಾಷಣೆಗಳ ಕುರಿತು ಅಪಸ್ವರ ಎತ್ತಿದ್ದು, ಕೂಡಲೇ ಇದನ್ನು ಸೇರಿ ಪಡಿಸಬೇಕೆಂದು ಆಗ್ರಹಿಸಿದ್ದವು. ಇದೀಗ ಚಿತ್ರತಂಡ ಇದಕ್ಕೆ ಪೂರಕವಾಗಿ ಸ್ಪಂದಿಸಲು ಮುಂದಾಗಿದೆ.

ಈ ಕುರಿತಂತೆ ಚಿತ್ರತಂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಆದಿಪುರುಷ್ ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಮಾರ್ಪಡಿಸಲು ಸಿದ್ಧರಿದ್ದೇವೆ ಎಂದು ಘೋಷಿಸಲಾಗಿದೆ.

ಅಲ್ಲದೆ ಈ ಕುರಿತಂತೆ ಸ್ಪಷ್ಟನೆ ನೀಡಿರುವ ‘ಆದಿಪುರುಷ್’ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶಿರ್, ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಉದ್ದೇಶವಿಲ್ಲ. ಚಿತ್ರದ ಡೈಲಾಗ್ ಗಳನ್ನು ಬದಲಾಯಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಾಯಿಯನ್ನು ನಿಂದಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read