ಮನೆಯಲ್ಲಿಡುವ ಈ ಐದು ವಸ್ತುಗಳು ಹಾಳು ಮಾಡುತ್ತೆ ಮನೆಯವರ ಸಂತೋಷ

ಮನೆ ನಿರ್ಮಾಣ ಮಾಡುವ ವೇಳೆ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಫೆಂಗ್ ಶೂಯಿ ನಿಯಮವನ್ನೂ ಇತ್ತೀಚೆಗೆ ಜನರು ಅನುಸರಿಸುತ್ತಿದ್ದಾರೆ.

ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಿದ್ರೂ ಕೆಲವೊಂದು ತಪ್ಪುಗಳಿಂದ ವಾಸ್ತು ದೋಷಕ್ಕೊಳಗಾಗಬೇಕಾಗುತ್ತದೆ. ಸೌಂದರ್ಯಕ್ಕಾಗಿ ಮನೆಯನ್ನು ಅಲಂಕರಿಸುವಾಗ ಅನೇಕ ವಿಷಯಗಳ ಬಗ್ಗೆ ತಿಳಿದಿರುವುದು ಸೂಕ್ತ.

ಮನೆಯ ಗಾರ್ಡನ್ ಸೌಂದರ್ಯವನ್ನು ಕಾರಂಜಿ ಹೆಚ್ಚಿಸುತ್ತದೆ. ಆದ್ರೆ ಈ ಕಾರಂಜಿಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ಹಣದ ಜೊತೆಗೆ ಸಂತೋಷ ಕೂಡ ಮನೆಯಿಂದ ಹೊರಗೆ ಹರಿದು ಹೋಗುತ್ತದೆ.

ಕಾರಂಜಿ ನೀರು ಹೇಗೆ ಹೊರಗೆ ಹರಿದು ಹೋಗುತ್ತದೆಯೋ ಅದೇ ರೀತಿ ಮನೆಯಲ್ಲಿರುವ ಹಣ ಹಾಗೂ ಗೌರವ ಹೊರಗೆ ಹೋಗುತ್ತದೆ.

ಭಗವಂತ ಶಿವನ ನಟರಾಜನ ರೂಪವಿರುವ ಫೋಟೋ ಅಥವಾ ಕಲಾಕೃತಿಯನ್ನು ಮನೆಯಲ್ಲಿ ಇಡಬೇಡಿ. ಈ ವಿಗ್ರಹ ಮನೆಯಲ್ಲಿದ್ದರೆ ಮನೆಯಲ್ಲಿ ಶಾಂತಿ ನಾಶವಾಗಿ ಸದಾ ಕಲಹ ನಡೆಯುತ್ತಿರುತ್ತದೆ.

ಮಹಾಭಾರತ ಯುದ್ಧದ ಬಗ್ಗೆ ಯಾರಿಗೆ ತಿಳಿದಿಲ್ಲ. ಯುದ್ಧದ ಫೋಟೋಗಳನ್ನು ಕೆಲವರ ಮನೆ ಗೋಡೆಗಳಲ್ಲಿ ನಾವು ಕಾಣ್ತೇವೆ. ಬಣ್ಣ ಬಣ್ಣಗಳಿಂದ ತುಂಬಿರುವ ಈ ಯುದ್ಧದ ಫೋಟೋ ನೋಡಲು ಸುಂದರವಾಗಿ ಕಾಣುತ್ತದೆ. ಆದ್ರೆ ವಾಸ್ತು ಪ್ರಕಾರ ಮನೆಯಲ್ಲಿ ಈ ಪೋಸ್ಟರ್ ಇರುವುದು ಶುಭವಲ್ಲ.

ತಾಜ್ ಮಹಲ್ ಪ್ರೀತಿಯ ಸಂಕೇತ. ಸೌಂದರ್ಯ ಹೆಚ್ಚಿಸಲು ಮನೆಯಲ್ಲಿ ತಾಜ್ ಮಹಲ್ ನ ಸಣ್ಣ ಪ್ರತಿಮೆಯನ್ನು ಇಟ್ಟಕೊಳ್ತಾರೆ. ತಾಜ್ ಮಹಲ್ ಬೇಗಂ ಮುಮ್ತಾಜ್ ಸಮಾಧಿ. ಸಮಾಧಿಯನ್ನು ಮನೆಯಲ್ಲಿಡುವುದು ಅಶುಭ.

ಮನೆಯ ಗೋಡೆಯ ಸೌಂದರ್ಯ ಹೆಚ್ಚಿಸಲು ಕಾಡು ಪ್ರಾಣಿಗಳ ಫೋಟೋವನ್ನು ಹಾಕ್ತಾರೆ. ವಾಸ್ತು ಪ್ರಕಾರ ಕಾಡು ಪ್ರಾಣಿಗಳ ಫೋಟೋಗಳನ್ನು ಗೋಡೆಗಳಿಗೆ ಹಾಕುವುದು ಶುಭವಲ್ಲ. ಮನೆಯಲ್ಲಿರುವವರ ಮನಸ್ಸು ಕಾಡು ಪ್ರಾಣಿಗಳಂತಾಗಿ ಸದಾ ಜಗಳ-ಗಲಾಟೆಯಾಗುತ್ತಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read