ಸಂಕ್ರಾಂತಿ ಹಬ್ಬಕ್ಕೆ ಗೋಡಂಬಿ ಪಿಸ್ತಾ ರೋಲ್ ಮಾಡಲು ತಯಾರಿ ಮಾಡಿಕೊಳ್ಳಿ

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡು ಎನ್ನೋದು ಮಾಮೂಲಿ. ಈ ಬಾರಿ ಸಂಕ್ರಾಂತಿಗೆ ಎಳ್ಳು ಬೆಲ್ಲದ ಜೊತೆ ರುಚಿರುಚಿ ಗೋಡಂಬಿ ಪಿಸ್ತಾ ರೋಲ್ ಮಾಡಿ.

ಗೋಡಂಬಿ ಪಿಸ್ತಾ ರೋಲ್ ಮಾಡಲು ಬೇಕಾಗುವ ಪದಾರ್ಥ :

ಪಿಸ್ತಾ ಪುಡಿ -95 ಗ್ರಾಂ.

ಸಕ್ಕರೆ -55 ಗ್ರಾಂ.

ಸಾವಯವ ಆಹಾರದ ಬಣ್ಣ -3 ಡ್ರಾಪ್ಸ್

ಹಾಲಿನ ಪುಡಿ – 1 ದೊಡ್ಡ ಚಮಚ

ನೀರು – ಮೂರು ದೊಡ್ಡ ಚಮಚ

ಗೋಡಂಬಿ ಪುಡಿ -135 ಗ್ರಾಂ

ಸಕ್ಕರೆ -150 ಗ್ರಾಂ

ನೀರು -60 ಮಿಲಿ

ಏಲಕ್ಕಿ ಪುಡಿ -1/4 ಚಮಚ

ತುಪ್ಪ – 1 ಚಮಚ

ಗೋಡಂಬಿ ಪಿಸ್ತಾ ರೋಲ್ ಮಾಡುವ ವಿಧಾನ :

ಮೊದಲು ಒಂದು ಪಾತ್ರೆಗೆ ಪಿಸ್ತಾ, ಸಕ್ಕರೆ, ಬಣ್ಣದ ಮೂರು ಹನಿ, ಹಾಲಿನ ಪುಡಿ ಹಾಕಿ ನೀರನ್ನು ಹಾಕಿ ಸ್ವಲ್ಪ ದಪ್ಪಗೆ ಮಿಶ್ರಣ ತಯಾರಿಸಿಕೊಳ್ಳಿ.

ಇನ್ನೊಂದು ಪಾತ್ರೆಗೆ ತುಪ್ಪ, ಗೋಡಂಬಿ ಹುಡಿ, ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಸಕ್ಕರೆ ಕರಗುವವರೆಗೆ ಬೇಯಿಸಿ. ನಂತ್ರ ಪಾರ್ಚ್ಮೆಂಟ್ ಶೀಟ್ ಮೇಲೆ ಗೋಡಂಬಿ ಮಿಶ್ರಣವನ್ನು ಉಂಡೆಯನ್ನು ಇಟ್ಟು ಅದ್ರ ಮೇಲೆ ಇನ್ನೊಂದು ಪಾರ್ಚ್ಮೆಂಟ್ ಶೀಟ್ ಇಟ್ಟು ಚಪಾತಿಯಂತೆ ಲಟ್ಟಿಸಿ.

ನಂತ್ರ ಶೀಟ್ ತೆಗೆದು ಮಧ್ಯದಲ್ಲಿ ಕತ್ತರಿಸಿ. ಆ ನಂತ್ರ ಪಿಸ್ತಾವನ್ನು ಉಂಡೆ ಕಟ್ಟಿ ಉದ್ದಗೆ ದಾರದಂತೆ ಮಾಡಿ, ಗೋಡಂಬಿ ಹಾಳೆ ಮೇಲಿಟ್ಟು ಗೋಡಂಬಿ ಹಾಳೆಯನ್ನು ರೋಲ್ ಮಾಡಿ. ರೋಲ್ ಆದ ನಂತ್ರ ಮಧ್ಯ ಮಧ್ಯ ಕತ್ತರಿಸಿ. ಒಳಗೆ ಪಿಸ್ತಾ ಮಿಶ್ರಣ ಹಾಗೂ ಹೊರಗೆ ಗೋಡಂಬಿ ಮಿಶ್ರಣ ಕಾಣುತ್ತದೆ. ಪಿಸ್ತಾ ಗೋಡಂಬಿ ರೋಲ್ ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read