ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನೇಕೆ ತಿನ್ನಬಾರದು…..? ಅದರ ವೈಜ್ಞಾನಿಕ ಕಾರಣ ತಿಳಿಯಿರಿ

ಮಳೆಗಾಲದಲ್ಲಿ ಕಾಯಿಲೆಗಳು ಹೆಚ್ಚು. ಅನೇಕ ರೀತಿ ಸೋಂಕಿನ ಅಪಾಯವಿರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯ ಜೊತೆಗೆ ದೈನಂದಿನ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವನೆ ಮಾಡಬಾರದು. ಮಾಂಸಾಹಾರ ಕೂಡ ಇವುಗಳಲ್ಲೊಂದು.

ಮಳೆಗಾಲದಲ್ಲಿ ನಾನ್ ವೆಜ್ ತಿನ್ನುವುದು ಏಕೆ ಅಪಾಯಕಾರಿ?

ಧಾರ್ಮಿಕ ದೃಷ್ಟಿಯಿಂದ ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗಾಗಿ ಅನೇಕರು ಮಾಂಸಾಹಾರ ಸೇವನೆ ಮಾಡುವುದಿಲ್ಲ. ಆದರೆ ವೈಜ್ಞಾನಿಕ ದೃಷ್ಟಿಯಿಂದಲೂ ಈ ಅವಧಿಯಲ್ಲಿ ಮಾಂಸಾಹಾರದಿಂದ ಅಂತರ ಕಾಯ್ದುಕೊಳ್ಳಬೇಕು.

ಶಿಲೀಂಧ್ರದ ಅಪಾಯಮಾನ್ಸೂನ್‌ನಲ್ಲಿ ಭಾರೀ ಮಳೆಯಿಂದಾಗಿ ಗಾಳಿಯಲ್ಲಿ ತೇವಾಂಶವು ಹೆಚ್ಚಾಗುತ್ತದೆ. ನಂತರ ಶಿಲೀಂಧ್ರಗಳ ಸೋಂಕು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಳೆಗಾಲದಲ್ಲಿ ನೇರ ಸೂರ್ಯನ ಬೆಳಕು ಮತ್ತು ಶಾಖದ ಕೊರತೆಯಿಂದಾಗಿ ಆಹಾರ ಪದಾರ್ಥಗಳು ಸಾಮಾನ್ಯಕ್ಕಿಂತ ವೇಗವಾಗಿ ಕೊಳೆಯಲು ಪ್ರಾರಂಭಿಸುತ್ತವೆ.

ದುರ್ಬಲ ಜೀರ್ಣಕ್ರಿಯೆ- ಮಳೆಗಾಲದಲ್ಲಿ  ವಾತಾವರಣದಲ್ಲಿ ತೇವಾಂಶವು ಹೆಚ್ಚಾಗುವುದರಿಂದ ಇದರಿಂದಾಗಿ ನಮ್ಮ ಜೀರ್ಣಕಾರಿ ಬೆಂಕಿಯ ಪರಿಣಾಮವು ಕಡಿಮೆಯಾಗುತ್ತದೆ. ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಜೀರ್ಣಕ್ರಿಯೆ ದುರ್ಬಲವಾದರೆ ಮಾಂಸಾಹಾರವು ಕರುಳಿನಲ್ಲಿ ಕೊಳೆಯಲು ಪ್ರಾರಂಭಿಸುತ್ತದೆ. ಅದೇ ಆಹಾರ ನಿಮಗೆ ವಿಷವಾಗಬಹುದು.

ಜಾನುವಾರುಗಳಿಗೂ ಅನಾರೋಗ್ಯ – ಮಳೆಗಾಲದಲ್ಲಿ ಕೀಟಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಇದರಿಂದ ಚಿಕೂನ್‌ಗುನ್ಯಾ ಮತ್ತು ಡೆಂಗ್ಯೂ ಸೊಳ್ಳೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ. ಪರಿಣಾಮ ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಆದ್ದರಿಂದ ಈ ಪ್ರಾಣಿಗಳ ಮಾಂಸ ಸೇವನೆಯು ದೇಹಕ್ಕೆ ಹಾನಿ ಮಾಡುತ್ತದೆ.

ಕಲುಷಿತ ಮೀನು – ಮೀನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಅದನ್ನು ತಪ್ಪಿಸಿ. ಯಾಕೆಂದರೆ ಭಾರೀ ಮಳೆಯಿಂದಾಗಿ ಎಲ್ಲಾ ಕೊಳಕು ನದಿ ಕೊಳ್ಳಗಳನ್ನು ತಲುಪುತ್ತದೆ. ಇದರಿಂದಾಗಿ ಮೀನುಗಳು ಕೂಡ ಕಲುಷಿತಗೊಳ್ಳುತ್ತವೆ. ಅವುಗಳನ್ನು ತಿನ್ನುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read