ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ದಿಲ್ ಖುಷ್’

ಲಕ್ಕಿ ವಿನಾಯಕ ದೇವಸ್ಥಾನದಲ್ಲಿ ಸೆಟ್ಟೇರಿದ ಹೊಸಬರ 'ದಿಲ್ ಖುಷ್' ಸಿನಿಮಾ, first-look-released-from-dil-kush-movie

ಪ್ರಮೋದ್ ಜಯ ನಿರ್ದೇಶನದ ರಂಜಿತ್ ಅಭಿನಯದ ದಿಲ್ ಖುಷ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೊಸ ಪೋಸ್ಟರ್ ವೊಂದನ್ನು instagram ಅಲ್ಲಿ ಹಂಚಿಕೊಂಡಿದ್ದಾರೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಗೃಹಪ್ರವೇಶ ಧಾರಾವಾಹಿಯ ನಟಿ ಸ್ಪಂದನ ಸೋಮಣ್ಣ ಈ ಸಿನಿಮಾದ  ನಾಯಕಿಯಾಗಿದ್ದಾರೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧರ್ಮಣ್ಣ ಕಡೂರು, ರಂಗಾಯಣ ರಘು, ಅರುಣ ಬಾಲರಾಜ್, ರಘುರಾಮನಕೊಪ್ಪ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಜಯಪ್ರಭಾ ಕಲರ್‌  ಫ್ರೇಮ್ಸ್ ಬ್ಯಾನರ್ ನಡಿ ಪ್ರಭಾಶೇಖರ್ ಮತ್ತು ಜಯಲಕ್ಷ್ಮಿ ಪ್ರವೀಣ್ ನಿರ್ಮಾಣ ಮಾಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read