HomeInternationalಶಾಲೆಯಲ್ಲಿ ನೆಕ್ಕುವ ಆಟವಾಡಿದ ಶಿಕ್ಷಕರು-ವಿದ್ಯಾರ್ಥಿಗಳು: ಪೋಷಕರು ಗರಂ

ಶಾಲೆಯಲ್ಲಿ ನೆಕ್ಕುವ ಆಟವಾಡಿದ ಶಿಕ್ಷಕರು-ವಿದ್ಯಾರ್ಥಿಗಳು: ಪೋಷಕರು ಗರಂ

ಅಪ್ರಾಪ್ತ ಬಾಲಕನೊಬ್ಬನಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳಿದ್ದಕ್ಕಾಗಿ ಧಾರ್ಮಿಕ ಮುಖಂಡ ದಲೈಲಾಮಾ ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ, ಅಮೆರಿಕದ ಶಾಲೆಯೊಂದರಲ್ಲಿ ನೆಕ್ಕುವ ಆಟದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳಲ್ಲಿ, ವಾಷಿಂಗ್ಟನ್ ರಾಜ್ಯದ ಡೆಸರ್ಟ್ ಹಿಲ್ಸ್ ಮಿಡ್ಲ್ ಸ್ಕೂಲ್‌ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನೆಕ್ಕುವ ಆಟದಲ್ಲಿ ಭಾಗವಹಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಗಾಜೊಂದಕ್ಕೆ ನಾಲ್ಕು ಕಡೆಗಳಿಂದ ಕ್ರೀಮ್ ಅನ್ನು ಸಿಂಪಡಿಸಲಾಗಿತ್ತು. ಇದನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೆಕ್ಕಿದ್ದಾರೆ. ಈ ವಿಡಿಯೋ ನೋಡಿದ ಪೋಷಕರು ಸಿಟ್ಟಿಗೆದ್ದಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಇಂಥ ನೀಚ ಕೃತ್ಯ ಮಾಡಿದ್ದಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಲೈಂಗಿಕ ವರ್ತನೆಗೆ ಒಡ್ಡಿಕೊಳ್ಳುವಂಥ ಇಂಥ ಆಟದಿಂದ ತಮ್ಮ ಮಕ್ಕಳನ್ನು ಆ ಶಾಲೆಗೆ ಕಳುಹಿಸುವುದಕ್ಕೆ ಪೋಷಕರು ಹಿಂದೇಟು ಹಾಕಿದ್ದಾರೆ. ಪ್ರಸ್ತುತ ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular