HomeCrimeಶಾಕಿಂಗ್: ಅಪ್ರಾಪ್ತೆಯನ್ನು ಅಪಹರಿಸಿದ 17ರ ಹುಡುಗ; ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ

ಶಾಕಿಂಗ್: ಅಪ್ರಾಪ್ತೆಯನ್ನು ಅಪಹರಿಸಿದ 17ರ ಹುಡುಗ; ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ

ಉತ್ತರಪ್ರದೇಶದ ಬಲ್ಲಿಯಾ ಗ್ರಾಮದಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಹುಡುಗನೊಬ್ಬ, ಸುಮಾರು ಒಂದು ತಿಂಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಒಂದು ತಿಂಗಳ ಹಿಂದೆ ಅದೇ ಗ್ರಾಮದ 17 ವರ್ಷದ ಹುಡುಗ ಬಾಲಕಿಯನ್ನು ಅಪಹರಿಸಿದ್ದ. ಮಗಳು ಕಾಣೆಯಾಗಿರುವ ಬಗ್ಗೆ ಬಾಲಕಿಯ ತಂದೆ ಡಿಸೆಂಬರ್‌ 25ರಂದು ಪೊಲೀಸರಿಗೆ ದೂರು ನೀಡಿದ್ದರು. ಹುಡುಗ ಬಾಲಕಿಯನ್ನು ಅಪಹರಿಸಿ ಗುಜರಾತ್‌ಗೆ ಕರೆದೊಯ್ದಿದ್ದಾನೆ.

ಅಲ್ಲಿ ಅಪ್ರಾಪ್ತೆ ಮೇಲೆ ಬಲಾತ್ಕಾರ ಎಸಗಿರುವುದು ಬೆಳಕಿಗೆ ಬಂದಿದೆ. ಗುರುವಾರ ಆತ ಗುಜರಾತ್‌ನಿಂದ ತನ್ನ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ನಾಗ್ರಾ ಪಟ್ಟಣದ ಗದ್ವಾರ್ ಮೋರ್ ಬಳಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಮೌವಿನಲ್ಲಿರುವ ಮಕ್ಕಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೋಕ್ಸೋ ಕಾಯ್ದೆ ಸೇರಿದಂತೆ ಸಂಬಂಧಿತ ಸೆಕ್ಷನ್‌ಗಳನ್ನು ಎಫ್‌ಐಆರ್‌ಗೆ ಸೇರಿಸಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular