HomeCrimeವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ಶಿವಮೊಗ್ಗ ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ಈ ದಾಳಿ ನಡೆಸಲಾಗಿತ್ತು.

ಕುವೆಂಪು ರಸ್ತೆಯ ಸಾಯಿ ಆರ್ಕೆಡ್‌ ನಲ್ಲಿರುವ ರಾಯಲ್‌ ಆರ್ಚ್‌ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ಪೊಲೀಸ್‌ ದಾಳಿ ನಡೆದಿತ್ತು. ಬೇರೆ ಕಡೆಯಿಂದ ಯುವತಿಯರನ್ನು ಕರೆಯಿಸಿ ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಸ್ಪಾ ಮಾಲೀಕರಾದ ಗೋಪಾಲ ಮತ್ತು ವಿದ್ಯಾಶ್ರೀಯನ್ನು ಬಂಧಿಸಲಾಗಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular