ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು ಕಣ್ತುಂಬಿಕೊಳ್ಳಲು ಒಮ್ಮೆ ಭೇಟಿ ನೀಡಿ. ಇಲ್ಲಿನ ಕಲ್ಲಿನ ರಥ, ದೇವಾಲಯಗಳು, ಬೃಹತ್ ವಿಗ್ರಹಗಳು ಹಂಪೆಯ ವೈಭವವನ್ನು ಸಾರಿ ಹೇಳುತ್ತವೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಹಂಪೆಯಲ್ಲಿ ಮುತ್ತು, ರತ್ನಗಳನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ವಿದೇಶಿ ಪ್ರವಾಸಿಗರೊಬ್ಬರು ದಾಖಲಿಸಿದ್ದಾರೆ.
ಹಂಪೆಯಲ್ಲಿ ವಿರೂಪಾಕ್ಷ ದೇವಾಲಯ, ಬೃಹತ್ ನಂದಿ ವಿಗ್ರಹ, ರಾಮ, ಲಕ್ಷ್ಮಣರ ವಿಗ್ರಹ, ಸ್ನಾನ ಗೃಹ ಸೇರಿದಂತೆ ಹಲವಾರು ನೋಡಬಹುದಾದ ಸ್ಥಳಗಳು ಇಲ್ಲಿವೆ. ಹಂಪೆಯ ಗತ ವೈಭವವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿರಿ. ಹೊಸಪೇಟೆಯಲ್ಲಿ ತಂಗಲು ವ್ಯವಸ್ಥೆ ಇದ್ದು, ಮೊದಲೇ ಮಾಹಿತಿ ಪಡೆದು ಹೋಗಿ ಬರಬಹುದಾಗಿದೆ.
You Might Also Like
TAGGED:hampi-temple-tour-place