HomeKarnatakaವಿಧಾನಸೌಧದಲ್ಲಿ ಹಣ ಪತ್ತೆ: 40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ? ಸರ್ಕಾರದ ವಿರುದ್ಧ ಡಿ.ಕೆ....

ವಿಧಾನಸೌಧದಲ್ಲಿ ಹಣ ಪತ್ತೆ: 40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ? ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ ವಿಚಾರ ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಟೀಕಿಸುತ್ತಿದ್ದ ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. 40% ಕಮಿಷನ್ ಸರ್ಕಾರಕ್ಕೆ ಈ ಹಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ವಿಧಾನಸೌಧದ ಪ್ರತಿ ಗೋಡೆಗೂ ಹಣವಿಲ್ಲದೇ ಏನೂ ನಡೆಯಲ್ಲ. ವಿಧಾನಸೌಧದಲ್ಲಿ ಶೇ.40-50ರಷ್ಟು ಕಮಿಷನ್ ನಡೆಯುತ್ತಿದೆ ಎಂದು ನಮಗೆ ಅನೇಕ ಮಾಹಿತಿಗಳು ಬಂದಿವೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಸಹಾಯಕ ಇಂಜಿನಿಯರ್ ಅವರ ಬ್ಯಾಗ್ ನಲ್ಲಿ 10.5 ಲಕ್ಷ ಹಣ ಪತ್ತೆಯಾಗಿದೆ. ಮಂತ್ರಿ ಮನೆಯಿಂದ ಕರೆ ಬಂತೆಂದು ಆತನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. 40% ಕಮಿಷನ್ ಗೆ ಈ ದುಡ್ಡೇ ದಾಖಲೆ ಅಲ್ಲವೇ? ಇನ್ನು 60 ದಿನ ಮಾತ್ರ ಈ ಸರ್ಕಾರ, ಏನು ಮಾಡ್ತಾರೆ ಅಂತಾ ನೋಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular