‘ವಿದ್ಯುತ್ ದರ’ ಏರಿಕೆ ಬೆನ್ನಲ್ಲೇ ಜನತೆಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ‘ನೀರಿನ ದರ’ ಏರಿಕೆ

ಬೆಂಗಳೂರು : ‘ವಿದ್ಯುತ್ ದರ’ (electricity rate) ಏರಿಕೆ ಬೆನ್ನಲ್ಲೇ ಶೀಘ್ರದಲ್ಲೇ ನೀರಿನ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ಸದ್ಯದಲ್ಲೇ ನೀರಿನ ದರ ಏರಿಕೆ ಆಗಬಹುದು ಎಂದು ಡಿಸಿಎಂ ಡಿಕೆಶಿ ಸುಳಿವು ನೀಡಿದ್ದಾರೆ. ಜಲಮಂಡಳಿಯ ( Water Board) ಆದಾಯ ಬಹಳ ಕಡಿಮೆ ಇದೆ. ಬೆಂಗಳೂರಿನ ಜನರಿಗೆ ಬಹಳ ಸ್ವಚ್ಚವಾದ ನೀರು ಪೂರೈಸಬೇಕು. ಎಲ್ಲೆಲ್ಲಿ ಸ್ವಚ್ಚ ನೀರು ಬಿಡಲು ಸಾಧ್ಯವಾಗುತ್ತಿಲ್ಲ, ಅಲ್ಲಿ ನೀರಿನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

‘ BWSSB’ ಸ್ಥಿತಿ ಬಹಳ ಚಿಂತಾಜನಕವಾಗಿದೆ. 2014 ರಿಂದ ಇಲ್ಲಿವರೆಗೆ ನೀರಿನ ದರ ಪರಿಷ್ಕರಣೆಯಾಗಿಲ್ಲ ಎಂದರು. ಹೊಸ ದರದ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read