ವಿದ್ಯಾರ್ಥಿಗಳ ಗಮನಕ್ಕೆ…. BMTC ಬಸ್ ಪಾಸ್ ಅವಧಿ ವಿಸ್ತರಣೆ; ಹೊಸ ಪಾಸ್ ಗಳಿಗೂ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ-ಬಿಎಂಟಿಸಿ ಕಳೆದ ವರ್ಷ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಬಸ್ ಪಾಸ್ ಮಾನ್ಯತೆ ಅವಧಿ ವಿಸ್ತರಿಸಿದೆ.

ಕಳೆದ ವರ್ಷದ ಬಸ್ ಪಾಸ್ ಅವಧಿ ಜುಲೈ 31ರವರೆಗೆ ಇರಲಿದೆ. ಇದರಿಂದ 2023-24ನೇ ಸಾಲಿನ ಹೊಸ ಬಸ್ ಪಾಸ್ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇದೇ ವೇಳೆ ಹೊಸ ಬಸ್ ಪಾಸ್ ಅವಧಿಗೆ ಅರ್ಜಿ ಸಲ್ಲಿಕೆ ಕೂಡ ಆರಂಭವಾಗಿದ್ದು, ಜುಲೈ 7ರಿಂದ ಹೊಸ ಬಸ್ ಪಾಸ್ ಕೂಡ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಸಕ್ತ ವರ್ಷದ ಶಾಲಾ-ಕಾಲೇಜುಗಳ ಶುಲ್ಕ ಪಾವತಿ ರಶೀದಿ ಅಥವಾ ಶಾಲಾ-ಕಾಲೇಜು ಗುರುತಿನ ಚೀಟಿ ಪ್ರಸ್ತುತಪಡಿಸಿ ಪಡೆಯಬಹುದು.

ಇದೇ ವೇಳೆ ವಿದ್ಯಾರ್ಥಿಗಳು ಜುಲೈ 31ರೊಳಗೆ ಹೊಸ ಬಸ್ ಗಳಿಗಾಗಿ ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ಸೂಚಿಸಿದೆ. ಆನ್ ಲೈನ್ ಅಪ್ಲಿಕೇಶನ್ ಗಳಿಗಾಗಿ ವಿದ್ಯಾರ್ಥಿಗಳು ಸೇವಾಸಿಂಧು ಆಫ್ ಅಥವಾ ಬಿಎಂಟಿಸಿ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ತುಂಬಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read