ವಾಟ್ಸಾಪ್ ಸ್ಟೇಟಸ್ ನಲ್ಲಿ ಮೋದಿ ಫೋಟೋ; ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ಸಾಮಾಜಿಕ ಜಾಲತಾಣ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹಾಕಿದ್ದಕ್ಕೆ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಬಿಂಕದಕಟ್ಟಿ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಪೂಜೇರ ಹಲ್ಲೆಗೊಳಗಾಗಿದ್ದು ಈತನ ಮೇಲೆ ಅದೇ ಗ್ರಾಮದ ಮಲ್ಲರಡ್ಡಿ ಅಗಸನಕೊಪ್ಪ, ಶ್ರೀನಾಥ ಆಗಸನಕೊಪ್ಪ, ಸೋಮನಗೌಡ ಮೂಲಿಮನಿ, ಮಂಜುನಾಥ ಮೂಲಿಮನಿ, ರಾಮರಡ್ಡಿ ಅಗಸನಕೊಪ್ಪ ಹಾಗೂ ರಂಗನಗೌಡ ಮೂಲಿಮನಿ ಹಲ್ಲೆ ನಡೆಸಿದ್ದಾರೆ.

ಭಾನುವಾರ ಸಂಜೆ ಹೈವೇ ಬಳಿ ರಾಘವೇಂದ್ರ ನಿಂತಿದ್ದ ವೇಳೆ ಈತನ ಬಳಿ ಬಂದ ಈ ಆರು ಮಂದಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಮೋದಿ ಫೋಟೋ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read