HomeHealthಲೋ ಬಿಪಿ ಸಮಸ್ಯೆ ಇದ್ದರೆ ಡಾಕ್ಟರ್‌ ಬಳಿ ಹೋಗಬೇಕಾಗಿಲ್ಲ, ನಿಮ್ಮಲ್ಲೇ ಇದೆ ಪರಿಹಾರ…!

ಲೋ ಬಿಪಿ ಸಮಸ್ಯೆ ಇದ್ದರೆ ಡಾಕ್ಟರ್‌ ಬಳಿ ಹೋಗಬೇಕಾಗಿಲ್ಲ, ನಿಮ್ಮಲ್ಲೇ ಇದೆ ಪರಿಹಾರ…!

 

ಕಡಿಮೆ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಈ ರೀತಿಯ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿ. ಲೋ ಬಿಪಿ ಸಮಸ್ಯೆ ಇದ್ದರೆ ಅದಕ್ಕೆ ಚಿಕಿತ್ಸೆ ಅಥವಾ ಪರಿಹಾರ ಕಂಡುಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋ ಬಿಪಿ ಲಕ್ಷಣಗಳು ತ್ವರಿತವಾಗಿ ಕಂಡುಬರುವುದಿಲ್ಲ. ಆದರೆ ಅದನ್ನು ನಿರ್ಲಕ್ಷಿಸುವುದರಿಂದ ಪ್ರಾಣಕ್ಕೇ ಅಪಾಯವಾಗಬಹುದು. ಕಡಿಮೆ ರಕ್ತದೊತ್ತಡದ ಲಕ್ಷಣಗಳೇನು? ಅದನ್ನು ಸುಲಭವಾಗಿ ಹೇಗೆ ಪರಿಹರಿಸಬಹುದು ಎಂಬುದನ್ನು ನೋಡೋಣ.

ಕಡಿಮೆ ರಕ್ತದೊತ್ತಡದ ಲಕ್ಷಣಗಳು –

ದೇಹದಲ್ಲಿ ನೀರಿನ ಕೊರತೆ

ಹೆಚ್ಚು ಒತ್ತಡ

ದೀರ್ಘಕಾಲದವರೆಗೆ ಹಸಿವು ತಡೆದುಕೊಳ್ಳುವ ಸಾಮರ್ಥ್ಯ

ಅನೇಕ ಬಾರಿ ಲೋ ಬಿಪಿಯ ಯಾವುದೇ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಕೆಲವು ಸಂಕೇತಗಳನ್ನು ದೇಹ ನೀಡಲಾರಂಭಿಸುತ್ತದೆ. ಉದಾಹರಣೆಗೆ ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು, ಮೂರ್ಛೆ ಹೋಗುವುದು, ಕೈಕಾಲು ತಣ್ಣಗಾಗುವುದು, ಆಯಾಸದ ಭಾವನೆ ಇವೆಲ್ಲವೂ ಲೋ ಬಿಪಿ ಲಕ್ಷಣಗಳು.

ಲೋ ಬಿಪಿ ಸಮಸ್ಯೆಗೆ ಪರಿಹಾರ…

ಬಿಪಿ ಯಾವಾಗಲೂ ಕಡಿಮೆಯಿದ್ದರೆ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚೆನ್ನಾಗಿ ನೀರು ಕುಡಿಯಬೇಕು. ದೇಹವನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ದಿನಕ್ಕೆ 8 ಲೋಟ ನೀರು ಕುಡಿಯಬಹುದು.

ಬಿಪಿ ಕಡಿಮೆಯಾದರೆ ಉಪ್ಪನ್ನು ಸೇವಿಸಬೇಕು. ಬಿಪಿಯನ್ನು ಸರಿದೂಗಿಸಲು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಬಿಪಿ ಸರಿಯಾಗಿರುತ್ತದೆ.

ಲೋ ಬಿಪಿ ಸಮಸ್ಯೆ ಇರುವವರು ಆಹಾರದಲ್ಲಿ ಕೆಫೀನ್ ಹೊಂದಿರುವ ವಸ್ತುಗಳನ್ನು ಸೇರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಣದಲ್ಲಿರುತ್ತದೆ.

ಕಾಲೋಚಿತ ಹಣ್ಣುಗಳನ್ನು ತಿನ್ನುವುದು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಲು ಬಯಸಿದರೆ ಋತುಮಾನದ ಹಣ್ಣುಗಳನ್ನು ಸೇವಿಸಲು  ಪ್ರಾರಂಭಿಸಬೇಕು.

For Latest News Updates, Join Our Whatsapp Community🚩
RELATED ARTICLES

Most Popular