ರೈಲಿನಲ್ಲಿ ಕುಳಿತು ‘ಸಿಂಗಾಪುರ್‌’ಗೆ ಹೋಗಲು ಸುವರ್ಣಾವಕಾಶ; ಪಾಸ್‌ಪೋರ್ಟ್-ವೀಸಾ ಇಲ್ಲದೆ ಅಗ್ಗದ ಪ್ರಯಾಣ….!

ಒಮ್ಮೆಯಾದರೂ ಸಿಂಗಾಪುರಕ್ಕೆ ಹೋಗಬೇಕು ಅನ್ನೋದು ಅದೆಷ್ಟೋ ಜನರ ಕನಸು. ಆದ್ರೆ ಅದಕ್ಕೆ ವೀಸಾ, ಪಾಸ್ಪೋರ್ಟ್‌ ಬೇಕು. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದ್ರೀಗ ಇವ್ಯಾವ ಗೊಡವೆಯೂ ಇಲ್ಲದೆ ರೈಲಿನಲ್ಲಿ ಕುಳಿತು ‘ಸಿಂಗಪುರ’ಕ್ಕೆ ಹೋಗಲು ಸುವರ್ಣಾವಕಾಶವಿದೆ.

ಭಾರತೀಯ ರೈಲ್ವೇ ವಿಶ್ವದ ಅತಿದೊಡ್ಡ ರೈಲು ಸೇವೆಗಳಲ್ಲಿ ಒಂದು. ರೈಲಿನ ಮೂಲಕವೇ ನೀವು ಸಿಂಗಾಪುರ ರೈಲು ನಿಲ್ದಾಣವನ್ನು ತಲುಪಬಹುದು. ಇದಕ್ಕಾಗಿ ಯಾವುದೇ ವೀಸಾ-ಪಾಸ್ಪೋರ್ಟ್ ಬೇಕಾಗಿಲ್ಲ. ಆದರೆ ಇದು ವಿದೇಶ ಸಿಂಗಾಪುರವಲ್ಲ. ಭಾರತದಲ್ಲೂ ಸಿಂಗಾಪುರ ಎಂಬ ಒಂದು ಸ್ಥಳವಿದೆ. ಸಿಂಗಾಪುರ್ ರೈಲ್ವೇ ನಿಲ್ದಾಣ ಎಂಬ ಹೆಸರಿನ ಸ್ಟೇಶನ್‌ ಕೂಡ ಇದೆ. ಸಿಂಗಾಪುರ ರೈಲು ನಿಲ್ದಾಣವು ಭಾರತದ ಒಡಿಶಾ ರಾಜ್ಯದಲ್ಲಿದೆ. ಅನೇಕ ರೈಲುಗಳು ಈ ನಿಲ್ದಾಣವನ್ನು ದಾಟುತ್ತವೆ.

ಈ ಸಿಂಗಾಪುರ ಮತ್ತು ವಿದೇಶಿ ಸಿಂಗಾಪುರದ ನಡುವಿನ ವ್ಯತ್ಯಾಸವೆಂದರೆ ಅದರ ಕಾಗುಣಿತವೂ ವಿಭಿನ್ನವಾಗಿದೆ ಮತ್ತು ಇದರ ಪೂರ್ಣ ಹೆಸರು ಸಿಂಗಾಪುರ್ ರೈಲು ನಿಲ್ದಾಣ. ಇಲ್ಲಿಗೆ ಹೋಗಲು, ಒಡಿಶಾಗೆ ನೇರ ರೈಲಿನಲ್ಲಿ ಹೋಗಿ ನಂತರ ಸಿಂಗಾಪುರ್ ರೈಲು ನಿಲ್ದಾಣದ ಮೂಲಕ ಹಾದುಹೋಗುವ ಯಾವುದೇ ರೈಲನ್ನು ಹತ್ತಿ ಅಲ್ಲಿಗೆ ತಲುಪಿ. ಇಲ್ಲಿಗೆ ಸಾಮಾನ್ಯ ರೈಲುಗಳ ದರವೇ ಇರುತ್ತದೆ.

ಬಿಲಾಸ್‌ಪುರ ತಿರುಪತಿ ಎಕ್ಸ್‌ಪ್ರೆಸ್, ಸಮತಾ ಎಕ್ಸ್‌ಪ್ರೆಸ್, ಹಿರಾಖಂಡ್ ಎಕ್ಸ್‌ಪ್ರೆಸ್ ಸೇರಿದಂತೆ 25 ಕ್ಕೂ ಹೆಚ್ಚು ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಇವುಗಳಲ್ಲಿ ಕೆಲವು ರೈಲುಗಳು ಮಾತ್ರ ಇಲ್ಲಿ ನಿಲ್ಲುತ್ತವೆ. ಸಿಂಗಾಪುರವನ್ನು ನೋಡಲು ಸಾಧ್ಯವಾಗದವರು ಓಡಿಶಾದ ಸಿಂಗಾಪುರ್‌ಗೆ ಒಮ್ಮೆ ವಿಸಿಟ್‌ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read