HomeAgricultureರೈತರೇ ಗಮನಿಸಿ: ಬೆಳೆ ನಷ್ಟ ಪರಿಹಾರ ಸೌಲಭ್ಯಕ್ಕೆ ಪ್ರೂಟ್ ಐಡಿಗೆ ಎಲ್ಲ ಸರ್ವೇ ನಂಬರ್ ಜೋಡಣೆ...

ರೈತರೇ ಗಮನಿಸಿ: ಬೆಳೆ ನಷ್ಟ ಪರಿಹಾರ ಸೌಲಭ್ಯಕ್ಕೆ ಪ್ರೂಟ್ ಐಡಿಗೆ ಎಲ್ಲ ಸರ್ವೇ ನಂಬರ್ ಜೋಡಣೆ ಕಡ್ಡಾಯ

ಹಾವೇರಿ: ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಲು ರೈತರು FRUITS ID ಹೊಂದಿರುವುದರ ಜೊತೆಗೆ ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೇ ನಂಬರ್‍ಗಳನ್ನು FRUITS ID ಗೆ ಸೇರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ.

ಕಾರಣ FRUITS ID ಹೊಂದಿರುವ ರೈತರು ಆಧಾರ ಕಾರ್ಡ್ ಹಾಗೂ ಉತಾರ ದಾಖಲಾತಿಗಳೊಂದಿಗೆ ಹತ್ತಿರದ ಗ್ರಾಮ ಒನ್/ ಸಾಮಾನ್ಯ ಸೇವಾ ಕೇಂದ್ರ/ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತುರ್ತಾಗಿ ಬಾಕಿ ಇರುವ ಸರ್ವೇ ನಂಬರ್‍ಗಳನ್ನು ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗುವುದಿಲ್ಲ.‌

ಜಿಲ್ಲೆಯ ರೈತರು FRUITS ID ಹೊಂದಿರುವುದರ ಜೊತೆಗೆ ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೇ ನಂಬರ್‍ಗಳನ್ನು FRUITS ID ಗೆ ಸೇರಿಸಿಕೊಳ್ಳಲು ಕೋರಲಾಗಿದೆ. ಇದಲ್ಲದೇ FRUITS ID ಹೊಂದಿರದ ರೈತರು ಸಹ ಮೇಲ್ಕಾಣಿಸಿದ ಎಲ್ಲಾ ದಾಖಲಾತಿಗಳೊಂದಿಗೆ FRUITS ID ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular