ಯುವತಿಯ ಭೀಕರ ಅಪಘಾತ ಸಾವಿನ ಕೇಸ್; ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು

ದೆಹಲಿಯಲ್ಲಿ 20 ವರ್ಷದ ಯುವತಿಯ ಭೀಕರ ಅಪಘಾತ ಸಾವಿನ ಕೇಸ್ ಮತ್ತೊಂದು ಹೊಸ ಬೆಳವಣಿಗೆ ಹೊರಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ ಸ್ಕೂಟಿಯಲ್ಲಿದ್ದ ಇಬ್ಬರು ಹುಡುಗಿಯರು ಕಂಜಾವಾಲಾ ಸುತ್ತಮುತ್ತಲಿನ ಹೋಟೆಲ್‌ಗಳಿಗೆ ಹೋಗಿದ್ದರು. ಹೋಟೆಲ್‌ನಲ್ಲಿ ಅವರೊಂದಿಗೆ ಇತರ ಹುಡುಗರೂ ಇದ್ದರು, ಹುಡುಗಿಯರು ಹೋಟೆಲ್‌ನಲ್ಲಿ ಜಗಳವಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ತರಾತುರಿಯಲ್ಲಿ ಹುಡುಗಿಯರು ಹೋಟೆಲ್ ನಿಂದ ಹೊರಹೋಗಿದ್ದಾರೆ.

ಹುಡುಗಿಯರಿಬ್ಬರೂ ಜಗಳವಾಡುತ್ತಿದ್ದರು. ಜಗಳ ಮಾಡಬೇಡಿ ಎಂದು ಮ್ಯಾನೇಜರ್ ಹೇಳಿದಾಗ ಕೆಳಗಡೆ ಇಳಿದು ಜಗಳ ಆರಂಭಿಸಿದ ಬಳಿಕ ಇಬ್ಬರೂ ಸ್ಕೂಟರ್‌ನಲ್ಲಿ ತೆರಳಿದ್ದರು ಎಂದು ಹೋಟೆಲ್ ಮ್ಯಾನೇಜರ್ ತಿಳಿಸಿದರು.

ದೆಹಲಿ ಪೊಲೀಸರು ಹೋಟೆಲ್‌ನಲ್ಲಿ ಹಾಜರಿದ್ದ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಹೋಟೆಲ್‌ನಲ್ಲಿ ಹುಡುಗಿಯರೊಂದಿಗೆ ಕಾಣಿಸಿಕೊಂಡಿದ್ದನ್ನು ಪ್ರಶ್ನಿಸಲು ಪೊಲೀಸರು ಕೆಲವು ಹುಡುಗರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಡುಗರಿಗೆ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ ಮತ್ತು ಹೋಟೆಲ್ ಸಿಬ್ಬಂದಿ ಅವರು ಹುಡುಗಿಯೊಂದಿಗೆ ಮಾತನಾಡುವುದನ್ನು ನೋಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸಿಸಿ ಕ್ಯಾಮೆರಾ ದೃಶ್ಯಗಳ ಪ್ರಕಾರ ಮೃತ ಹುಡುಗಿ ತನ್ನ ಸ್ನೇಹಿತೆಯೊಂದಿಗೆ ಹೋಟೆಲ್‌ನ ಹೊರಗೆ ಕಾಣಿಸಿಕೊಂಡಿದ್ದಳು. 20 ವರ್ಷದ ಯುವತಿ ತನ್ನ ಸ್ನೇಹಿತೆಯೊಂದಿಗೆ ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದಳು.

ಅಪಘಾತದ ನಂತರ ಹುಡುಗಿಯ ಸ್ನೇಹಿತೆ ಸ್ಥಳದಿಂದ ಪರಾರಿಯಾಗಿದ್ದು ಆಕೆಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read