HomeKarnatakaಯಡಿಯೂರಪ್ಪನವರಿಲ್ಲದೆ ಚುನಾವಣೆಗೆ ಹೋದರೆ ಬಿಜೆಪಿ 40 ಸೀಟು ಗೆಲ್ಲುವುದೂ ಕಷ್ಟ: ಬೇಳೂರು ಗೋಪಾಲಕೃಷ್ಣ

ಯಡಿಯೂರಪ್ಪನವರಿಲ್ಲದೆ ಚುನಾವಣೆಗೆ ಹೋದರೆ ಬಿಜೆಪಿ 40 ಸೀಟು ಗೆಲ್ಲುವುದೂ ಕಷ್ಟ: ಬೇಳೂರು ಗೋಪಾಲಕೃಷ್ಣ

ಯಡಿಯೂರಪ್ಪನವರಿಲ್ಲದೆ ಚುನಾವಣೆಗೆ ಹೋದರೆ ಬಿಜೆಪಿ 40 ಸೀಟು ಗೆಲ್ಲುವುದೂ ಸಹ ಕಷ್ಟ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದ್ದಾರೆ.

ಯಡಿಯೂರಪ್ಪನವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟ ಬೇಳೂರು ಗೋಪಾಲಕೃಷ್ಣ, ಬಿ.ಎಲ್. ಸಂತೋಷ್, ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರ ಕಾರಣಕ್ಕಾಗಿ ಕಣ್ಣೀರಿಡುತ್ತಾ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು ಎಂದು ಹೇಳಿದರು.

ಫೆಬ್ರವರಿ 27ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕಾಗಿ ಅಂದು ಶಾಲಾ – ಕಾಲೇಜುಗಳ ಪ್ರಾಂಶುಪಾಲರು ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಕರೆತರುವಂತೆ ಒತ್ತಾಯಿಸಲಾಗುತ್ತಿದೆ ಬೇಳೂರು ಗೋಪಾಲಕೃಷ್ಣ ಇದೇ ಸಂದರ್ಭದಲ್ಲಿ ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular