ಕಲಬುರಗಿಯಲ್ಲಿ ಮಂಗಳವಾರ ಪ್ರಚಾರಕ್ಕೂ ಮೊದಲು ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮಾತುಕತೆ ರಾಜಕೀಯ ಬಣ್ಣ ಬಳಿದುಕೊಂಡಿದೆ.
ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಕ್ಕಳ ನಡುವಿನ ತಂತಿಬೇಲಿ ಕಂಡು, ಮಕ್ಕಳು ತಂತಿಬೇಲಿಯ ಹಿಂದೆ ಏಕೆ ಇದ್ದಾರೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಲ್ಲಿ ತಮ್ಮ ಮೆಗಾ ರೋಡ್‌ಶೋಗೆ ಮುನ್ನ ಮಕ್ಕಳ ಗುಂಪಿನೊಂದಿಗೆ ಹೃದಯಸ್ಪರ್ಶಿ ಸಂಭಾಷಣೆ ನಡೆಸಿದರು. ಈ ವಿಡಿಯೋ ವೈರಲ್ ಆಗಿದೆ.
ಮಾತುಕತೆ ವೇಳೆ ಪ್ರಧಾನಿ ಮೋದಿ ಮತ್ತು ಮಕ್ಕಳ ನಡುವಿನ ಮುಳ್ಳುತಂತಿಯನ್ನ ಗಮನಿಸಿದ ಕಾಂಗ್ರೆಸ್ ನಾಯಕ ಕಮ್ರು ಚೌಧರಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ವಿಡಿಯೋಗೆ ಟ್ಯಾಗ್ ಮಾಡಿ “ಮಕ್ಕಳು ಮುಳ್ಳುತಂತಿಯ ಹಿಂದೆ ಏಕೆ ಇದ್ದಾರೆ” ಎಂದು ಪ್ರಶ್ನಿಸಿದ್ದಾರೆ.
ಮುಳ್ಳುತಂತಿಯ ಬೇಲಿಯ ಹೊರಗೆ ಇರಿಸಲಾಗಿರುವ ಮಕ್ಕಳನ್ನು ಪ್ರಧಾನಿ ಮೋದಿ ನೋಡುತ್ತಿರುವುದು ಬೇಸರ ತಂದಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. “ತಮ್ಮ ದೇಶದ ಮಕ್ಕಳೊಂದಿಗೆ ಬೆರೆಯದ ವಿಶ್ವದ ಏಕೈಕ ನಾಯಕ ಶ್ರೀ ಮೋದಿ” ಎಂದು ಟ್ವೀಟ್ ಮಾಡಿದ್ದಾರೆ.
ಮಕ್ಕಳು ಪಾಕಿಸ್ತಾನಕ್ಕೆ ಸೇರಿದವರಂತೆ ತೋರುತ್ತಿದೆ. ಅವರು ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ವೈರಲ್ ವಿಡಿಯೋದಲ್ಲಿ ಪ್ರಧಾನಿ ಮೋದಿ ನಡೆ ಬಗ್ಗೆ ಆಕ್ರೋಶ ಹೊರಬಿದ್ದಿದೆ.
VIDEO | PM Modi interacted with children during his visit to Kalaburagi in Karnataka earlier today. #KarnatakaAssemblyElections2023 pic.twitter.com/GmGY5xDiSv
— Press Trust of India (@PTI_News) May 2, 2023