HomeKarnatakaಮೂತ್ರ ಸೋರಿಕೆ ತಡೆಗಟ್ಟಲು ಯಶಸ್ವಿ ಶಸ್ತ್ರಚಿಕಿತ್ಸೆ

ಮೂತ್ರ ಸೋರಿಕೆ ತಡೆಗಟ್ಟಲು ಯಶಸ್ವಿ ಶಸ್ತ್ರಚಿಕಿತ್ಸೆ

ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿಯಗಿ ಇದೆ ಮೊದಲ ಬಾರಿಗೆ ಮೂತ್ರ ರೋಗ ಶಸ್ತ್ರ ಚಿಕಿತ್ಸೆಯ ಮೂಲಕ ಮೂತ್ರ ಸೋರಿಕೆಯನ್ನು ಗುಣಪಡಿಸಲಾಗಿದೆ.

ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರ ಚೀಲಕ್ಕೆ ತೊಂದರೆಯಾಗಿ 38 ವರ್ಷದ ಮಹಿಳೆಗೆ ನಿರಂತರವಾಗಿ ಮೂತ್ರ ಸೋರುತ್ತಿತ್ತು. ಇದರಿಂದ ಹಾಕಿದ ಬಟ್ಟೆ ಒದ್ದೆಯಾಗಿ ಮೂತ್ರದ ವಾಸನೆಯಿಂದ, ಬೇರೆಯವರು ಅವರೊಂದಿಗೆ ಬೆರೆಯಲು ಹಿಂದೆಮುಂದೆ ಯೋಚಿಸುವಂತಾಗಿತ್ತು.

ಈ ಮೂತ್ರ ಸೋರುವಿಕೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ಸಾಮಾಜಿಕವಾಗಿ ಬೇರೆಯವರೊಂದಿಗೆ ಬೆರೆಯುವುದನ್ನು ಸಹ ನಿಲ್ಲಿಸಿದ್ದರು, ಒಟ್ಟಾರೆ ತಮ್ಮ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎನ್‌ಯು ಆಸ್ಪತ್ರೆಯಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡಿದಾಗ ಇವರ ಮೂತ್ರ ಚೀಲದಲ್ಲಿ ರಂಧ್ರವಾಗಿ ಯೋನಿ ಮಾರ್ಗಕ್ಕೆ ಜೋಡಣೆಯಾಗಿರುವುದು ಖಚಿತವಾಯಿತು. ‌

ಈ ತೊಂದರೆಗೆ ಎನ್‌ಯು ಆಸ್ಪತ್ರೆಯ ಖ್ಯಾತ ಮೂತ್ರ ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಪ್ರದೀಪ್ ಅವರು ಲ್ಯಾಪ್ರೋಸ್ಕೊಪಿಯ ಮುಖಾಂತರ ಶಸ್ತ್ರಚಿಕಿತ್ಸೆಯನ್ನು ಮಾಡಿ, ಮೂತ್ರ ಸೋರಿಕೆಯನ್ನು ಯಶಸ್ವಿಯಾಗಿ ಗುಣಪಡಿಸಿರುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular