ಬ್ಲಾಕ್‌ ಹೆಡ್ಸ್‌ ನಿವಾರಿಸಲು ಇದೊಂದೇ ʼತರಕಾರಿʼ ಸಾಕು…!

ಬ್ಲ್ಯಾಕ್ ಹೆಡ್ಸ್ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮೂಗಿನ ಮೇಲೆ, ಅಕ್ಕಪಕ್ಕದಲ್ಲಿ, ತುಟಿಗಳ ಅಕ್ಕಪಕ್ಕದಲ್ಲಿ ಬ್ಲಾಕ್‌ ಹೆಡ್ಸ್‌ ಹೆಚ್ಚಾಗಿ ಕಂಡುಬರುತ್ತವೆ. ಇವುಗಳಿಂದಾಗಿ ಮುಖದ ಚರ್ಮವು ಸಡಿಲಗೊಳ್ಳಲು ಪ್ರಾರಂಭಿಸುತ್ತದೆ.

ನಿಂಬೆಹಣ್ಣಿನ ಮೂಲಕ ಸುಲಭವಾಗಿ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಎರಡನ್ನೂ ಹೋಗಲಾಡಿಸಬಹುದು. ಈ ಸಮಸ್ಯೆಗೆ ನಿಂಬೆ ಹಣ್ಣನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಕಪ್ಪು ಚುಕ್ಕೆಗಳಿಗೆ ನಿಂಬೆ ಹಣ್ಣು ರಾಮಬಾಣ ಅಂದ್ರೂ ತಪ್ಪಾಗಲಾರದು. ಸದ್ಯ ನಿಂಬೆ ಹಣ್ಣು ಬಹಳ ದುಬಾರಿಯಾಗಿದೆ. ಆದ್ರೆ ತ್ವಚೆಯ ಆರೈಕೆಗೆ ಇದು ಅವಶ್ಯಕ. ಔಷಧಿಗಳಿಗಿಂತಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಂಬೆ ಹಣ್ಣನ್ನು ಬಳಸಿ ನಿಮ್ಮ ಮುಖದ ಫೋರ್ಸ್‌ ಓಪನ್‌ ಮಾಡಬಹುದು, ಬಳಿಕ ಬ್ಲಾಕ್‌ ಹೆಡ್ಸ್‌ ರಿಮೂವ್‌ ಮಾಡುವುದು ಸುಲಭವಾಗುತ್ತದೆ.

1 ಚಮಚ ಅಡಿಗೆ ಸೋಡಾ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಎಲ್ಲೆಲ್ಲಿ ಬ್ಲಾಕ್‌ ಹೆಡ್ಸ್‌ ಇದೆಯೋ ಅಲ್ಲೆಲ್ಲ ಹಚ್ಚಿ, ಸ್ವಲ್ಪ ಹೊತ್ತು ಹಾಗೇ ಒಣಗಲು ಬಿಡಿ. ಪೇಸ್ಟ್ ಒಣಗಿದಾಗ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಬ್ಲಾಕ್‌ ಹೆಡ್ಸ್‌ ತಂತಾನೇ ಮಾಯವಾಗುತ್ತದೆ. ಇನ್ನು ವೈಟ್‌ ಹೆಡ್ಸ್‌ ಕೂಡ ತ್ವಚೆಯ ಅಂದವನ್ನ ಹಾಳು ಮಾಡುತ್ತದೆ.

ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುವ ಗ್ರಂಥಿಗಳು ಊದಿಕೊಂಡಾಗ ಬಿಳಿ ಚುಕ್ಕೆಗಳು ರೂಪುಗೊಳ್ಳುತ್ತವೆ. ವೈಟ್ ಹೆಡ್ಸ್ ಹೋಗಲಾಡಿಸಲು ನಿಂಬೆ ರಸ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಬೆರಳುಗಳ ಸಹಾಯದಿಂದ ವೈಟ್ ಹೆಡ್ಸ್ ಮೇಲೆ ಹಚ್ಚಿ. ಲಘುವಾಗಿ ಮಸಾಜ್‌ ಮಾಡಿಕೊಂಡು 20 ನಿಮಿಷ ಹಾಗೇ ಬಿಡಿ. ನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಮಾಡಿದರೆ ವೈಟ್‌ ಹೆಡ್ಸ್‌ ಸಮಸ್ಯೆ ನಿವಾರಣೆಯಾಗುತ್ತದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read