HomeInternationalಮಿಸ್ ಯು.ಎಸ್.ಎ. ಗೆ ಒಲಿದ ವಿಶ್ವ ಸುಂದರಿ ಪಟ್ಟ; ಕಳೆದ ವರ್ಷದ ವಿಜೇತೆ ಭಾರತದ ಹರ್ನಾಜ್...

ಮಿಸ್ ಯು.ಎಸ್.ಎ. ಗೆ ಒಲಿದ ವಿಶ್ವ ಸುಂದರಿ ಪಟ್ಟ; ಕಳೆದ ವರ್ಷದ ವಿಜೇತೆ ಭಾರತದ ಹರ್ನಾಜ್ ಸಂಧು ಅವರಿಂದ ಕಿರೀಟ

2022ರ ವಿಶ್ವ ಸುಂದರಿ ಪಟ್ಟವನ್ನು ಅಮೆರಿಕಾದ Bonney Gabriel ಪಡೆದುಕೊಂಡಿದ್ದಾರೆ. 83 ಸುಂದರಿಯರ ಪೈಕಿ ಅತ್ಯುತ್ತಮ ಉತ್ತರ ಹೇಳಿದ ಕಾರಣಕ್ಕೆ ಇವರನ್ನು ಆಯ್ಕೆ ಮಾಡಲಾಗಿದೆ.

71ನೇ ವಿಶ್ವ ಸುಂದರಿ ಸ್ಪರ್ಧೆ ಅಮೆರಿಕಾದ ಲೂಸಿಯಾನದ ನ್ಯೂ ಓರ್ಲೆನ್ಸ್ ನಲ್ಲಿ ನಡೆದಿದ್ದು, ಮಿಸ್ ವೆನಿಜುವೆಲಾ ಹಾಗೂ ಮಿಸ್ ಡಾಮಿಕನ್ ರಿಪಬ್ಲಿಕ್ ಮೊದಲ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ವಿಶ್ವ ಸುಂದರಿ ಪಟ್ಟವನ್ನು ಪಡೆದುಕೊಂಡಿರುವ Bonney Gabriel ಅವರಿಗೆ ಕಳೆದ ವರ್ಷದ ವಿಜೇತೆ ಭಾರತದ ಹರ್ನಾಜ್ ಸಂಧು ಕಿರೀಟ ಧಾರಣೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular