HomeIndiaಮಾದಕದ್ರವ್ಯ ಕುಡಿಸಿ ನೀಟ್ ಪರೀಕ್ಷೆ ಆಕಾಂಕ್ಷಿ ಮೇಲೆ ಅತ್ಯಾಚಾರ: ಗರ್ಭಿಣಿಯಾದ ಸಂತ್ರಸ್ತೆ: ಮದುವೆಯಾಗಿ ಮಗು ಜನಿಸುತ್ತಿದ್ದಂತೆ...

ಮಾದಕದ್ರವ್ಯ ಕುಡಿಸಿ ನೀಟ್ ಪರೀಕ್ಷೆ ಆಕಾಂಕ್ಷಿ ಮೇಲೆ ಅತ್ಯಾಚಾರ: ಗರ್ಭಿಣಿಯಾದ ಸಂತ್ರಸ್ತೆ: ಮದುವೆಯಾಗಿ ಮಗು ಜನಿಸುತ್ತಿದ್ದಂತೆ ಎಸ್ಕೇಪ್ ಆದ ಆರೋಪಿ

ಲಕ್ನೋ: ಮಾದಕದ್ರವ್ಯ ಕೊಟ್ಟು ನೀಟ್ ಪರೀಕ್ಷೆ ಆಕಾಂಕ್ಷಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಗರ್ಭಿಣಿಯಾದ ಸಂತ್ರಸ್ತೆಯನ್ನು ವಿವಾಹವಾಗಿ ಮಗು ಜನಿಸುತ್ತಿದ್ದಂತೆ ಆರೋಪಿ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ಯುವತಿ ನೀಟ್ ಪರೀಕ್ಷೆಗೆಂದು ಲಕ್ನೋದ ಬಂದು ಗೋಮತಿ ನಗರದಲ್ಲಿ ಉಳಿದುಕೊಂಡಿದ್ದಳು. ಪರೀಕ್ಷಾ ತಯಾರಿ ನಡೆಸುತ್ತಿದ್ದ ಯುವತಿಯನ್ನು 2023ರಲ್ಲಿ ಕ್ಯಾಬ್ ಚಾಲಕ ಆದಿತ್ಯ ಯಾದವ್ ಎಂಬಾತ ಪರಿಚಯಿಸಿಕೊಂಡಿದ್ದ. ಇಬ್ಬರ ನಡುವೆ ಸ್ನೇಹವಿತ್ತು. ಊಟಕ್ಕೆ ಹೋಟೆಲ್ ಗೆ ಕರೆದೊಯ್ದ ವೇಳೆ ಆದಿತ್ಯ ಯುವತಿಗೆ ಚಹಾದಲ್ಲಿ ಮಾದಕದ್ಯವ್ಯ ಬೆರೆಸಿಕೊಟ್ಟಿದ್ದಾನೆ. ಬಳಿಕ ಹೋಟೆಲ್ ರೂಮ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಗರ್ಭಿಣಿಯಾಗುತ್ತಿದಂತೆ ಸಂತ್ರಸ್ತೆ ಹಾಗೂ ಆರೋಪಿ ದೇವಸ್ಥಾನದಲ್ಲಿ ಮದುವೆಯಾಗುದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ಹೆರಿಗೆಯಾಗಿ ಮಗಳು ಹುಟ್ಟಿದ ತಕ್ಷಣ ಆರೋಪಿ ಮನೆಯಿಂದ ಪರಾರಿಯಾಗಿದ್ದಾರೆ. ಮದುವೆ ಬಳಿಕ ಆತ ತನ್ನ ಮನೆಯವರನ್ನೂ ಪರಿಚಯಿಸಿಲ್ಲ. ಈಗ ಇದ್ದಕ್ಕಿದ್ದಂತೆ ಆದಿತ್ಯ ನಾಪತ್ತೆಯಾಗಿದ್ದಾನೆ.

ಆದಿತ್ಯ ಯಾದವ್ ಔಷಧಿಗಳನ್ನು ತರುವುದಾಗಿ ಹೇಳಿ ಹೋದವನು ವಾಪಸ್ ಬಂದಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಮಹಿಳೆ ತನ್ನ ಸ್ನೇಹಿತರ ಮೂಲಕ ಅವನನ್ನು ಸಂಪರ್ಕಿಸಿದಾಗ, ಆತ ನೀನು ಮತ್ತು ನಿನ್ನ ಮಗಳು ಇಬ್ಬರು ಬದುಕಲು ಅರ್ಹರಲ್ಲ ಎಂದು ಹೇಳಿದ್ದಾನಂತೆ.

ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular