HomeLatest Newsಮಹಿಳಾ ಟಿ20 ವಿಶ್ವಕಪ್: ಇಂದು ನಡೆಯಲಿದೆ ಭಾರತ ಹಾಗೂ ಪಾಕಿಸ್ತಾನ ಕಾಳಗ

ಮಹಿಳಾ ಟಿ20 ವಿಶ್ವಕಪ್: ಇಂದು ನಡೆಯಲಿದೆ ಭಾರತ ಹಾಗೂ ಪಾಕಿಸ್ತಾನ ಕಾಳಗ

ಪುರುಷರ ಕ್ರಿಕೆಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯವೆಂದರೆ ಭಾರತದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.

ಅದೇ ರೀತಿ ಇಂದು ಮಹಿಳಾ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದ್ದು,  ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಿ20 ವಿಶ್ವಕಪ್ ನ ನಾಲ್ಕನೇ ಪಂದ್ಯ ಇದಾಗಿದೆ, ಗ್ರೂಪ್ ಬಿ ನಲ್ಲಿ ಭಾರತ,  ಪಾಕಿಸ್ತಾನ, ವೆಸ್ಟ್ ಇಂಡೀಸ್, ಐರ್ಲೆಂಡ್, ಇಂಗ್ಲೆಂಡ್ ಸೇರಿದಂತೆ 5 ತಂಡಗಳು ಗ್ರೂಪ್ ಬಿ ನಲ್ಲಿವೆ.

ಮಹಿಳಾ ಭಾರತ ತಂಡವನ್ನು ಹರ್ಮಾನ್ ಪ್ರೀತ್ ಕೌರ್ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಸ್ಟಾರ್ ಆಟಗಾರ್ತಿಯರಾದ ಸ್ಮೃತಿ  ಮಂದಾನ,  ಆಲ್ ರೌಂಡರ್ ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಯುವ ಆಟಗಾರ್ತಿ ಶೆಫಾಲಿ ವರ್ಮಾ ಗೆ ತಂಡದಲ್ಲಿ ಅವಕಾಶ ಸಿಕ್ಕಿದ್ದು, ಯಾವ ರೀತಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
RELATED ARTICLES

Most Popular