HomeHealthಮರೆಯದೆ ತಿನ್ನಿ ಪೌಷ್ಟಿಕಾಂಶಗಳ ಆಗರ ನುಗ್ಗೇಕಾಯಿ

ಮರೆಯದೆ ತಿನ್ನಿ ಪೌಷ್ಟಿಕಾಂಶಗಳ ಆಗರ ನುಗ್ಗೇಕಾಯಿ

ನುಗ್ಗೇಕಾಯಿಯ ಸೀಸನ್ ಮತ್ತೆ ಆರಂಭವಾಗಿದೆ. ಇದರ ವಾಸನೆ ರುಚಿ ಇಷ್ಟ ಇಲ್ಲ ಎಂಬ ಸಬೂಬು ದೂರವಿಟ್ಟು ಇಂದೇ ನುಗ್ಗೇಕಾಯಿ ಕೊಂಡು ತಂದು ಸೇವಿಸಿ. ಏಕೆಂದರೆ ಇದರಲ್ಲಿ ಹಲವು ವಿಧದ ಜೀವಸತ್ವಗಳಿವೆ.

ಪೌಷ್ಟಿಕಾಂಶದ ಆಗರವಾಗಿರುವ ನುಗ್ಗೇಕಾಯಿಯ ಸಿಪ್ಪೆ ಹಾಗೂ ದಂಟು ಎರಡೂ ಬಹುಪಯೋಗಿ. ಪಲ್ಯ, ಸಾಂಬಾರು ಹಾಗೂ ರೊಟ್ಟಿಯ ರೂಪದಲ್ಲಿ ಇವುಗಳನ್ನು ಸೇವಿಸಬಹುದು. ನಿಯಮಿತವಾಗಿ ಇದನ್ನು ಸೇವಿಸುತ್ತಿದ್ದರೆ ನಿಮಗೆ ಹಿಮೋಗ್ಲೋಬಿನ್ ಕೊರತೆಯ ಸಮಸ್ಯೆಯೇ ಕಾಡದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾರಿನಂಶ ಹೇರಳವಾಗಿರುವ ನುಗ್ಗೇಕಾಯಿಯನ್ನು ಮಲಬದ್ಧತೆ ಅಥವಾ ಪೈಲ್ಸ್ ಸಮಸ್ಯೆ ಇರುವವರು ವಾರದಲ್ಲಿ ಮೂರು ಬಾರಿ ಸೇವಿಸುತ್ತಿದ್ದರೆ ವೈದ್ಯರನ್ನು ಕಾಣಬೇಕಾದ ಅಗತ್ಯವೇ ಬಾರದು.

ಅಧ್ಯಯನವೊಂದರ ಪ್ರಕಾರ ನುಗ್ಗೇಕಾಯಿಯಿಂದ ಲಿವರ್ ಸಮಸ್ಯೆಯನ್ನು ಹೋಗಲಾಡಿಸಬಹುದು. ಯಕೃತ್ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಗುಣ ಇದಕ್ಕಿದೆ. ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡಿ ಸೋಂಕು ನಿವಾರಕ ಬ್ಯಾಕ್ಟೀರಿಯಾಗಳು ಬೆಳೆಯದಂತೆಯೂ ಇದು ನೋಡಿಕೊಳ್ಳುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular