ಮದುವೆ ಬಳಿಕ ಮಗಳ ತಲೆ ಮೇಲೆ ಎಂಜಲು ಉಗುಳುತ್ತಾನೆ ತಂದೆ; ಈ ವಿಚಿತ್ರ ಪದ್ಧತಿ ಹಿಂದಿದೆ ಈ ಕಾರಣ

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಅತ್ಯಂತ ಮಹತ್ವದ ದಿನ. ಇದನ್ನು ಅತ್ಯಂತ ಸ್ಮರಣೀಯವಾಗಿಸಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಮದುವೆಯ ಆಚರಣೆ ಬೇರೆ ಬೇರೆ ಸ್ಥಳಗಳಲ್ಲಿ ವಿಭಿನ್ನವಾಗಿರುತ್ತದೆ. ವಿವಾಹ ಎಷ್ಟು ಅದ್ಧೂರಿಯಾಗಿ ನೆರವೇರುತ್ತದೆ ಎಂಬುದಕ್ಕಿಂತಲೂ ಅಲ್ಲಿನ ಕೆಲವು ಸಂಪ್ರದಾಯಗಳು ವಿಶಿಷ್ಟವಾಗಿರುತ್ತವೆ. ಪುರಾತನ ಇತಿಹಾಸದಲ್ಲಿ ಮದುವೆಗಳು ಯಾವಾಗಲೂ ತುಂಬಾ ಆನಂದದಾಯಕವಾಗಿರಲಿಲ್ಲ. ಕೆಲವು ವಿಲಕ್ಷಣ ಮತ್ತು ವಿಶಿಷ್ಟ ಆಚರಣೆಗಳಿಂದ ತುಂಬಿರುತ್ತಿದ್ದವು.

ಆಧುನಿಕ ಕಾಲದ ಸಂಬಂಧಗಳು ಮತ್ತು ಮದುವೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಆದ್ರೆ ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದಂತಹ ವಿಚಿತ್ರ ಆಚರಣೆಯೊಂದು ಕೀನ್ಯಾದಲ್ಲಿ ಈಗಲೂ ಜೀವಂತವಾಗಿದೆ. ಆಫ್ರಿಕನ್ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ವಾಸಿಸುವ ಮಸಾಯಿ ಜನಾಂಗ ಇಲ್ಲಿನ ಅತ್ಯಂತ ಪುರಾತನ ನಿವಾಸಿಗಳು. ಇಂದಿಗೂ ಅವರು ತಮ್ಮ ಪ್ರಾಚೀನ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಅನುಸರಿಸುತ್ತಾರೆ.  ಶತಶತಮಾನಗಳಿಂದಲೂ ಅವರ ಜೀವನ ಶೈಲಿ ಬದಲಾಗಿಲ್ಲ.

ಇಲ್ಲಿ ಮದುವೆಯ ಬಳಿಕ ನವವಿವಾಹಿತರು ವಧುವಿನ ತಂದೆಯ ಆಶೀರ್ವಾದವನ್ನು ಪಡೆಯುತ್ತಾರೆ. ಈ ವೇಳೆ ತಂದೆ ನೀಡುವ ಆಶೀರ್ವಾದ ನಿಮ್ಮನ್ನು ದಿಗ್ಭ್ರಮೆಗೊಳಿಸಬಹುದು. ಯಾಕಂದ್ರೆ ತಂದೆ, ಮಗಳ ತಲೆಯ ಮೇಲೆ ಎಂಜಲು ಉಗುಳುವ ಮೂಲಕ ಆಶೀರ್ವದಿಸುತ್ತಾನೆ. ತಂದೆಯಿಂದ ಆಶೀರ್ವಾದ ಪಡೆದ ಬಳಿಕ ಆಕೆ ತನ್ನ ಪತಿಯ ಮನೆಗೆ ಹೊರಟು ಹೋಗುತ್ತಾಳೆ.

ತವರಿನಿಂದ ಹೊರಟ ಬಳಿಕ ವಧು ಅಪ್ಪಿತಪ್ಪಿಯೂ ಹಿಂದಿರುಗಿ ನೋಡಬಾರದು, ನೋಡಿದರೆ ಆಗೆ ಅಲ್ಲೇ ಕಲ್ಲಾಗುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ಉಗುಳುವುದು ಮಾಸಾಯಿಗಳಲ್ಲಿ ಒಂದು ಪ್ರಮುಖ ಆಚರಣೆಯಾಗಿದೆ. ಕೈಕುಲುಕುವಾಗ ವ್ಯಾಪಾರಿಗಳು ತಮ್ಮ ಅಂಗೈಗಳ ಮೇಲೆ ಉಗುಳುತ್ತಾರೆ. ಹಿರಿಯರು ನವಜಾತ ಶಿಶುಗಳ ಮೇಲೆ ಉಗುಳುವ ಮೂಲಕ ಆಶೀರ್ವದಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read