HomeIndiaಮದುವೆಯಲ್ಲಿ ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು....!

ಮದುವೆಯಲ್ಲಿ ಡಾನ್ಸ್‌ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು….!

ಭೋಪಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸೂತಕದ ಛಾಯೆ ಆವರಿಸಿದೆ. ಮದುವೆ ಸಡಗರದ ಮಧ್ಯೆ ಡಾನ್ಸ್ ಮಾಡುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವ್ಯಕ್ತಿಗೆ ಹೃದಯ ಸ್ತಂಭನವಾಗಿದೆ ಎಂದು ಹೇಳಲಾಗ್ತಾ ಇದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನಿವಾಸಿ ಅಭಯ್ ಸಚನ್ ಮೃತ ದುರ್ದೈವಿ.

ಮದುವೆಯಲ್ಲಿ ಪಾಲ್ಗೊಳ್ಳಲೆಂದೇ ಅಭಯ್‌  ರೇವಾಗೆ ಬಂದಿದ್ದ. ಬ್ಯಾಂಡ್‌ ಹಾಗೂ ಡ್ರಮ್ಸ್‌ ಸದ್ದಿನೊಂದಿಗೆ ಮದುವೆಯ ಸಡಗರ ಜೋರಾಗಿತ್ತು. ಎಲ್ಲರೂ ಖುಷಿಯಲ್ಲಿ ನರ್ತಿಸುತ್ತಿದ್ರು. ಆ ಗುಂಪಿನಲ್ಲೇ ಅಭಯ್‌ ಕೂಡ ಇದ್ದ. ನೃತ್ಯ ಮಾಡುತ್ತಲೇ ಅಭಯ್‌ ಕೆಳಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು  ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಸಾವನ್ನಪ್ಪಿದ್ದ. ಈ ಆಘಾತಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮದುವೆ ಸಮಾರಂಭದಲ್ಲಿ ಶೋಕ ಮಡುಗಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular