ಮದುವೆಯಲ್ಲಿ ಗೆಳೆಯ ಕೊಟ್ಟ ಉಡುಗೊರೆಗೆ ಎಲ್ಲರ ಮೆಚ್ಚುಗೆ ; ಅಷ್ಟಕ್ಕೂ ಅದರಲ್ಲಿದ್ದದ್ದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಿ | Viral Video

ಮದುವೆ ಸಮಾರಂಭದಲ್ಲಿ ವಧು-ವರರಿಗೆ ಅವರ ಸ್ನೇಹಿತನೊಬ್ಬ ನೀಡಿದ ಅಚ್ಚರಿಯ ಉಡುಗೊರೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ವೇದಿಕೆ ಮೇಲೆ ನಿಂತಿದ್ದ ನವಜೋಡಿಗೆ ಸ್ನೇಹಿತನೊಬ್ಬ ದೊಡ್ಡ ಗಿಫ್ಟ್ ತರುತ್ತಾನೆ. ಮೊದಲು ನೋಡಿದವರಿಗೆ ಅದೊಂದು ಫೋಟೋ ಫ್ರೇಮ್ ಇರಬಹುದೆಂದು ಭಾವಿಸಬಹುದು. ಆದರೆ, ಅದರ ಕವರ್ ತೆಗೆದಾಗ ಅಲ್ಲಿ ನೆರೆದಿದ್ದವರೆಲ್ಲರೂ ಅಚ್ಚರಿಯಿಂದ ಕಣ್ಣರಳಿಸುತ್ತಾರೆ!

ಸಾಮಾನ್ಯವಾಗಿ ಮದುವೆಯಲ್ಲಿ ವಧು-ವರರಿಗೆ ಅವರ ಸ್ನೇಹಿತರು ನೀಡುವ ವಿಶಿಷ್ಟ ಉಡುಗೊರೆಗಳ ಕಥೆಗಳನ್ನು ಕೇಳಿರುತ್ತೇವೆ. ಇದೀಗ ಅದೇ ಸಾಲಿಗೆ ಸೇರುವ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇಂತಹ ಸ್ನೇಹಿತರು ಸಿಗಲು ಅದೃಷ್ಟ ಮಾಡಿರಬೇಕು ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಅಷ್ಟಕ್ಕೂ ಆ ಸ್ನೇಹಿತ ನೀಡಿದ ಉಡುಗೊರೆ ಏನು ಗೊತ್ತಾ? ಆತ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಹನಿಮೂನ್‌ಗೆ ಹೋಗಲು ವಿಮಾನ ಟಿಕೆಟ್‌ಗಳನ್ನು ಗಿಫ್ಟ್ ಆಗಿ ನೀಡಿದ್ದಾನೆ! ಇದು ನಿಜಕ್ಕೂ ಮರೆಯಲಾಗದ ಉಡುಗೊರೆ. ಯಾಕೆಂದರೆ, ಈ ಮೂಲಕ ವಧು-ವರರಿಗೆ ಸುಂದರವಾದ ಪಯಣದೊಂದಿಗೆ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಅವಕಾಶ ಸಿಗುತ್ತದೆ.

ವೈರಲ್ ವಿಡಿಯೋದಲ್ಲಿ, ವಧು ಮತ್ತು ವರ ವೇದಿಕೆ ಮೇಲೆ ನಿಂತಿರುವಾಗ, ನೀಲಿ ಬಣ್ಣದ ಹೊದಿಕೆಯಲ್ಲಿ ಸುತ್ತಿದ ದೊಡ್ಡ ಉಡುಗೊರೆಯನ್ನು ಸ್ನೇಹಿತ ತರುತ್ತಾನೆ. ಅದರ ಕವರ್ ತೆಗೆದ ತಕ್ಷಣ, ಅಲ್ಲಿ ನೆರೆದಿದ್ದವರೆಲ್ಲರೂ ಅಚ್ಚರಿಯಿಂದ ನೋಡುತ್ತಾರೆ. ಏಕೆಂದರೆ, ಆ ಸ್ನೇಹಿತ ಕೇವಲ ಮಾಲ್ಡೀವ್ಸ್‌ಗೆ ಹೋಗಲು ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿರಲಿಲ್ಲ, ಬದಲಾಗಿ ಅವರ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿದ್ದನು!

ಈ ವಿಷಯವನ್ನು ಸಂತೋಷದಿಂದ ಎಲ್ಲರಿಗೂ ತಿಳಿಸಿದ ನಂತರ, ಆ ಸ್ನೇಹಿತ ವಧು ಮತ್ತು ವರನನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಾನೆ. ಈ ಮೂವರು ಬಹಳ ಆತ್ಮೀಯ ಸ್ನೇಹಿತರೆಂದು ವಿಡಿಯೋ ನೋಡಿದರೆ ತಿಳಿಯುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಸಣ್ಣ ಸಂತೋಷಗಳನ್ನು ಸಹ ಅರಿತು, ಅವುಗಳನ್ನು ವಿಶೇಷವಾಗಿಸುವ ಇಂತಹ ಸ್ನೇಹಿತರು ಅದೃಷ್ಟವಂತರಿಗೆ ಮಾತ್ರ ಸಿಗುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. @marathi_weddingz ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋಗೆ ಈಗಾಗಲೇ ಸಾವಿರಾರು ಲೈಕ್‌ಗಳು ಬಂದಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read