ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ. ಮೆಟ್ರೋ ಬ್ಯಾರಿಕೇಡ್ ಕಾರಿನ ಮೇಲೆ ಬಿದ್ದ ಘಟನೆ ದೊಡ್ದನೆಕ್ಕುಂದಿ-ಮಹದೇವಪುರ ಮಾರ್ಗದಲ್ಲಿ ನಡೆದಿದೆ.
ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಸಂಪೂರ್ಣ ಜಖಂ ಗೊಂಡಿದೆ. ಮೆಟ್ರೋ ಕಾಮಗಾರಿಗಾಗಿ ಅಳವಡಿಸಿದ್ದ ಬ್ಯಾರಿಕೇಡ್ ಹುಂಡೈ i10 ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸ್ವಲ್ಪದರಲ್ಲಿ ಪರಾಗಿದ್ದಾರೆ.
ಸಂತೋಷ್ ಎಂಬುವವರು ತನ್ನ ಕುಟುಂಬದ ಜೊತೆ ಕಾರಿನಲ್ಲಿ ಕೆ.ಆರ್.ಪುರಂ ಕಡೆಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಮೆಟ್ರೋ ಬ್ಯಾರಿಕೇಡ್ ಕಾರಿನ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.
https://twitter.com/KannadaPrabha/status/1617153071930540032?ref_src=twsrc%5Etfw%7Ctwcamp%5Etweetembed%7Ctwterm%5E1617153071930540032%7Ctwgr%5E09946fb3881845bd5868837680e67bcfdc59fa64%7Ctwcon%5Es1_&ref_url=https%3A%2F%2Fwww.kannadaprabha.com%2Fkarnataka%2F2023%2Fjan%2F22%2Fanother-namma-metro-accident-metro-barricade-falls-on-car-passengers-escaped-sources-485711.html