HomeLatest Newsಮಕ್ಕಳ ಬಾಯಲ್ಲಿ ನೀರೂರಿಸುತ್ತೆ 'ಬನಾನಾ ಕೇಕ್'

ಮಕ್ಕಳ ಬಾಯಲ್ಲಿ ನೀರೂರಿಸುತ್ತೆ ‘ಬನಾನಾ ಕೇಕ್’

ಬೇಕಾಗುವ ಪದಾರ್ಥಗಳು :

3 ಬಾಳೆಹಣ್ಣು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

¾ ಕಪ್ ಸಕ್ಕರೆ

¼ ಕಪ್ ಮೊಸರು

1 ಟೀ ಸ್ಪೂನ್ ವೆನಿಲ್ಲಾ ಎಕ್ಟ್ರಾಕ್ಟ್

ಅರ್ಧ ಕಪ್ ಆಲಿವ್ ಆಯಿಲ್

2 ಕಪ್ ಗೋಧಿ ಹಿಟ್ಟು

1 ಟೀ ಸ್ಪೂನ್ ಬೇಕಿಂಗ್ ಪೌಡರ್

¼ ಟೀಸ್ಪೂನ್ ಬೇಕಿಂಗ್ ಸೋಡಾ

¼ ಟೀಸ್ಪೂನ್ ದಾಲ್ಚಿನ್ನಿ ಪುಡಿ

ಅರ್ಧ ಕಪ್ ಚಾಕೊಲೇಟ್ ಚಿಪ್

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ :

ಬಾಳೆಹಣ್ಣುಗಳಿಗೆ ಸಕ್ಕರೆ ಬೆರೆಸಿ ಚೆನ್ನಾಗಿ ಹಿಸುಕಿಕೊಳ್ಳಿ.  ಗ್ರೈಂಡ್ ಮಾಡಿದರೂ ಸರಿ. ಇದಕ್ಕೆ ಮೊಸರು, ಆಲಿವ್ ಆಯಿಲ್, ವೆನಿಲ್ಲಾ ಹಾಕಿ ಕಲಕಿ. ಈ ಮಿಶ್ರಣಕ್ಕೆ ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ದಾಲ್ಚಿನ್ನಿ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದನ್ನು ಪಾತ್ರೆಗೆ ಹಾಕಿಕೊಂಡು ಇದರ ಮೇಲೆ ಚಾಕೊಲೇಟ್ ಚಿಪ್ ಹರಡಿದ ಬಳಿಕ 180 ಡಿಗ್ರಿಯಲ್ಲಿ ಒಂದು ಗಂಟೆಗಳ ಕಾಲ ಓವನ್ ನಲ್ಲಿಟ್ಟರೆ ಬನಾನಾ ಕೇಕ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular