ಮಕ್ಕಳು ನಿಮ್ಮ ಬಳಿ ಹೇಳಿಕೊಳ್ಳುವ ಸೀಕ್ರೆಟ್ಸ್ ನಿಮ್ಮಲ್ಲೇ ಉಳಿಸಿಕೊಳ್ಳಿ

ಪುಟ್ಟ ಮಕ್ಕಳು ದೇವರ ಸಮಾನ. ಅವರಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಆದರೂ ಪುಟ್ಟ ಕಂದಮ್ಮಗಳು ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪು ಮಾಡಿ ಹೆದರಿರುತ್ತಾರೆ ಅಥವಾ ಅಂತಹ ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನ ಪಡುತ್ತಾರೆ.

ಸಾಮಾನ್ಯವಾಗಿ ಮಕ್ಕಳು ತಮ್ಮ ಪ್ರೀತಿ ಪಾತ್ರರ ಬಳಿ ಅಥವಾ ಹೆಚ್ಚು ನಂಬಿಕೆ ಇರುವವರ ಬಳಿ ಇಂತಹ ವಿಷಯಗಳನ್ನು ಹೇಳಿಕೊಂಡಿರುತ್ತಾರೆ. ಅಕಸ್ಮಾತ್ ನಿಮ್ಮ ಮಗು ಅಂತಹ ಕೆಲವು ಸೀಕ್ರೆಟ್ಸ್ ಗಳನ್ನು ನಿಮ್ಮ ಬಳಿ ಹೇಳಿಕೊಂಡಿದ್ದರೆ, ಆ ಗುಟ್ಟುಗಳು ನಿರುಪದ್ರವಿಗಳಾಗಿದ್ದರೆ, ಹಾನಿಕರವಲ್ಲದೆ ಇದ್ದರೆ ಅವುಗಳನ್ನು ಎಲ್ಲರ ಬಳಿ ಹೇಳಿಕೊಳ್ಳಬೇಡಿ. ಇದರಿಂದ ಮಕ್ಕಳ ನಂಬಿಕೆಗೆ ದೊಡ್ಡ ಪೆಟ್ಟು ಬೀಳಬಹುದು.

ಒಂದು ವೇಳೆ ಮಕ್ಕಳು ಸ್ವಲ್ಪ ಮಟ್ಟಿಗೆ ಗಂಭೀರ ತಪ್ಪು ಮಾಡಿದ್ದರೂ ಅದನ್ನು ಪ್ರೀತಿ ಇಂದ ತಿಳಿಹೇಳಿ. ಗದರಬೇಡಿ. ಇದರಿಂದ ಮಕ್ಕಳ ಮನಸ್ಸನ್ನು ಮುಂದೆ ಇನ್ನೂ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read