HomeLatest Newsಮಕ್ಕಳಿಗೆ ಇಷ್ಟವಾಗುವ ಟೇಸ್ಟೀ ಬೋರ್ನ್ವೀಟಾ ಶಾರ್ಜಾ ʼಮಿಲ್ಕ್ ಶೇಕ್ʼ

ಮಕ್ಕಳಿಗೆ ಇಷ್ಟವಾಗುವ ಟೇಸ್ಟೀ ಬೋರ್ನ್ವೀಟಾ ಶಾರ್ಜಾ ʼಮಿಲ್ಕ್ ಶೇಕ್ʼ

ನಿಮ್ಮ ಮಕ್ಕಳು ಹಾಲು ಕುಡಿಯಲು ಹಟ ಮಾಡುತ್ತಿದ್ದಾರಾ ಅಥವಾ ಪ್ರತಿ ದಿನ ಒಂದೇ ರೀತಿಯ ಹಾಲನ್ನು ಕುಡಿಯಲು ಒಪ್ಪುತ್ತಿಲ್ವೇ? ಹಾಗಿದ್ರೆ ಅವರಿಗೆ ನೀಡಿ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್.

ಇದು ನಿಮ್ಮ ಮಕ್ಕಳಿಗೆ ಇಷ್ಟವಾಗುವುದರ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೇಗೆ ಅಂತೀರಾ??? ಈ ಶೇಕನ್ನು ಡ್ರೈ ಪ್ರೂಟ್ಸ್, ಹಾಲು ಮತ್ತು ಬಾಳೆಹಣ್ಣನ್ನು ಬಳಸಿ ಮಾಡಲಾಗುತ್ತೆ. ಎಲ್ಲರ ಮನೆಯಲ್ಲೂ ದೊರೆಯುವ ಪದಾರ್ಥಗಳಾಗಿರುವುದರಿಂದ ಸುಲಭವಾಗಿ ಮಾಡಿಕೊಳ್ಳಬಹುದು.

ಬೋರ್ನ್ವೀಟಾ ಶಾರ್ಜಾ ಮಿಲ್ಕ್ ಶೇಕ್ ಗೆ ಬೇಕಾಗಿರುವ ಪದಾರ್ಥಗಳು :

ಬೋರ್ನ್ವೀಟಾ : 3 ಟೇಬಲ್ ಸ್ಪೂನ್

ಬಾಳೆಹಣ್ಣು : 1

ಸಕ್ಕರೆ : 2 ಟೇಬಲ್ ಸ್ಪೂನ್

ಕೋಲ್ಡ್ ಮಿಲ್ಕ್ : 1 ಕಪ್

ಬಾದಾಮಿ : 5

ಗೋಡಂಬಿ : 4

ಐಸ್ ಕ್ಯೂಬ್ಸ್ : 4 ಪೀಸ್

ಏಲಕ್ಕಿ : ಚಿಟಿಕೆ

ಮಾಡುವ ವಿಧಾನ :

ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿದು ಸಣ್ಣ ತುಂಡುಗಳಾಗಿ ಮಾಡಿ, ಬ್ಲೆಂಡರ್ ಜಾರ್ ಗೆ ಹಾಕಿ. ಇದಕ್ಕೆ ಮೇಲೆ ತಿಳಿಸಿರುವ ಪದಾರ್ಥಗಳಾದ ಹಾಲು, ಬೋರ್ನ್ವೀಟಾ, ಬಾದಾಮಿ, ಸಕ್ಕರೆ, ಗೋಡಂಬಿ ಮತ್ತು ಏಲಕ್ಕಿ ಜೊತೆಗೆ ಐಸ್ ಕ್ಯೂಬ್ಸ್ ಎಲ್ಲವನ್ನು ಹಾಕಿ ಗ್ರೈಂಡ್ ಮಾಡಿ. ನಂತರ ಈ ಶೇಕನ್ನು ಒಂದು ಗ್ಲಾಸ್ ಗೆ ಹಾಕಿದರೆ ರುಚಿಕರ ಬೋರ್ನ್ವೀಟಾ ಶಾರ್ಜಾ ಮಿಲ್ಕ್ ರೆಡಿ. ಇದನ್ನು ಮಕ್ಕಳಿಗೆ ಒಮ್ಮೆ ಕೊಟ್ಟು ನೋಡಿ ಮತ್ತೆ ಮತ್ತೆ ಕೇಳುವುದರಲ್ಲಿ ಇನ್ನೊಂದು ಮಾತಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular