ಮಕ್ಕಳಿಗೂ ಇಷ್ಟವಾಗುತ್ತೆ ಮೊಳಕೆ ಕಾಳಿನ ರೋಲ್

ಸಂಜೆಯಾಗುತ್ತಲೇ ಏನನ್ನಾದರೂ ಸವಿಯಲು ಮನಸ್ಸಾಗುತ್ತದೆ. ಹಾಗಂತ ತಿಂದಿದ್ದನ್ನೇ ನಿತ್ಯ ಎಷ್ಟು ಅಂತ ಸವಿಯುವುದು. ಬೋಂಡಾ, ಬಜ್ಜಿ, ಕುರಕುಲು ಇವೆಲ್ಲಾ ಬೋರ್ ಎನಿಸಿದರೆ ರುಚಿಯಾದ ಆರೋಗ್ಯಕರ ಮೊಳಕೆಕಾಳಿನ ರೋಲ್ ಟೇಸ್ಟ್ ಮಾಡಿ ನೋಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಅರೆಬೆಂದ ಚಪಾತಿಗಳು 6
ಮೊಳಕೆ ಬಂದ ಹೆಸರು ಹಾಳು 1 ಕಪ್
ಮೆಂತ್ಯ ಸೊಪ್ಪು 1 ಕಪ್
ಹಸಿ ಮೆಣಸಿನಕಾಯಿ 2
ಚಿಟಿಕೆ ಅರಿಶಿಣ
ನಿಂಬೆರಸ ಅರ್ಧ ಚಮಚ
ಬೇಕಾಗುವಷ್ಟು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಚಪಾತಿ ಸ್ಪ್ರೆಡ್ ಗಾಗಿ
ಸಣ್ಣಗೆ ಹೆಚ್ಚಿದ 1 ಈರುಳ್ಳಿ
ಸಣ್ಣಗೆ ಹೆಚ್ಚಿದ 4-5 ಬೆಳ್ಳುಳ್ಳಿ ಎಸಳು
ಜೀರಿಗೆ ಅರ್ಧ ಚಮಚ
ಅರ್ಧ ಕಪ್ ಗಟ್ಟಿಮೊಸರು
ಅರ್ಧ ಚಮಚ ಖಾರದ ಪುಡಿ
ಚಿಟಿಕೆ ಇಂಗು
ಬೇಕಾಗುವಷ್ಟು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮೊದಲು ಚಪಾತಿ ಸ್ಪ್ರೆಡ್ ಮಾಡಿಕೊಳ್ಳಬೇಕು. ಸ್ಪವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದ ನಂತರ ಜೀರಿಗೆಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಸ್ವಲ್ಪ ಕೆಂಪಗಾದ ಮೇಲೆ ಇದನ್ನು ತೆಗೆದು ಮೊಸರಿಗೆ ಹಾಕಿಕೊಳ್ಳಬೇಕು. ಅದಕ್ಕೆ ಖಾರದ ಪುಡಿ, ಇಂಗು, ಉಪ್ಪು ಹಾಕಿ, ಮೆಂತ್ಯೆ ಸೊಪ್ಪು ಹಾಕಿಕೊಳ್ಳಿ.

ಸ್ಪವ್ ಮೇಲೆ ಬಾಣಲೆಯನ್ನು ಇಟ್ಟು ಒಂದು ಚಮಚ ಎಣ್ಣೆ ಹಾಕಿ, ಕಾದ ನಂತರ ಹಸಿ ಮೆಣಸಿನಕಾಯಿ ಹೆಚ್ಚಿ ಹಾಕಿಕೊಳ್ಳಿ. ಇದಕ್ಕೆ ಮೆಂತ್ಯೆ ಸೊಪ್ಪು ಸ್ವಲ್ಪ ಹೆಚ್ಚಿ ಹಾಕಿ ಹುರಿಯಿರಿ. ನಂತರ ಮೊಳಕೆ ಕಟ್ಟಿದ ಹೆಸರು ಕಾಳನ್ನು ಬೇಯಿಸಿಕೊಂಡು ಇದಕ್ಕೆ ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲೆಸಿಕೊಳ್ಳಿ. ನೀರಿನ ಅಂಶವೆಲ್ಲಾ ಹೋಗುವವರೆಗೂ ಹುರಿಯಿರಿ. ನಂತರ ನಿಂಬೆರಸ ಹಾಕಿ ಕೆಳಗಿಳಿಸಿ.

ಒಲೆಯ ಮೇಲೆ ತವಾ ಇಟ್ಟು ಚಪಾತಿಯನ್ನು ಬೇಯಿಸಿಕೊಳ್ಳಿ. ಚಪಾತಿಗೆ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಒಂದು ಚಪಾತಿಯ ಮೇಲೆ ಮೆಂತ್ಯೆಯ ಸೊಪ್ಪನ್ನು ಒಂದು
ಕೊನೆಯಲ್ಲಿ ಇಡಿ. ಉಳಿದ ಚಪಾತಿ ಭಾಗದಲ್ಲಿ ಮೊದಲು ಮಾಡಿಟ್ಟುಕೊಂಡಿದ್ದ ಸ್ಪ್ರೆಡ್ ಅನ್ನು ಸವರಿಕೊಂಡು ರೋಲ್‌ನಂತೆ ಸುತ್ತಿಕೊಳ್ಳಿ. ಇದು ತಿನ್ನಲು ಬಹಳ ರುಚಿಕರವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read