
ಭದ್ರಾ ಎಡದಂಡೆ ನಾಲೆಗೆ ಜನವರಿ 1 ರಿಂದ ಹಾಗೂ ಬಲದಂಡೆ ನಾಲೆಗೆ ಜನವರಿ 3ರಿಂದ ನೀರನ್ನು ಹರಿಸಲಾಗುತ್ತಿದ್ದು, ಇದೀಗ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಹೆಚ್ಚುವರಿ ದಿನಗಳಿಗೆ ನೀರು ಹರಿಸಲು ಸರ್ಕಾರದ ಅನುಮೋದನೆ ದೊರೆತಿದೆ.
ಈ ಹಿನ್ನೆಲೆಯಲ್ಲಿ ಭದ್ರಾ ಎಡದಂಡೆ ನಾಲೆಯಲ್ಲಿ ಮೇ 12ರ ವರೆಗೆ ಹಾಗೂ ಬಲದಂಡೆ ನಾಲೆಯಲ್ಲಿ ಮೇ 18 ರವರೆಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ ಎಂದು ತಿಳಿಸಲಾಗಿದ್ದು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ಸಹಕರಿಸಲು ಕೋರಲಾಗಿದೆ.

